Advertisement

“ತಾಲಾ ಖೋಲೋ’, “ಮಂದಿರ್‌ ವಹೀ ಬನಾಯೇಂಗೇ’ಎಂದಿದ್ದ ಉಡುಪಿ

11:20 AM Nov 20, 2017 | |

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 1985ರ ಅಕ್ಟೋಬರ್‌ 31, ನವೆಂಬರ್‌ 1 ಹೀಗೆ ಎರಡು ದಿನ ಧರ್ಮ ಸಂಸದ್‌ ಅಧಿವೇಶನ ನಡೆಯಿತು. ವಿವಿಧ ಸಂಪ್ರದಾಯ ಗಳ ಸುಮಾರು 800 ಸಾಧುಸಂತರು ಒಂದೆಡೆ ಪಾಲ್ಗೊಂಡದ್ದು ಐತಿಹಾಸಿಕವಾಗಿತ್ತು. ಸಂಸ್ಕೃತ ಕಾಲೇಜಿನ ಆವರಣದಿಂದ ಸ್ವಾಮೀಜಿಯವರನ್ನು ಆಕರ್ಷಕ ಮೆರವಣಿಗೆಯಲ್ಲಿ ರಥಬೀದಿಗೆ ಕರೆದುಕೊಂಡು ಬಂದಾಗ ಶ್ರೀಕೃಷ್ಣ ಮಠದ ಮುಂಭಾಗ ಪರ್ಯಾಯ ಪೀಠಸ್ಥರಾಗಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅರಳು ಹಾಕಿ ಸಾಧುಸಂತರನ್ನು ಸ್ವಾಗತಿಸಿದರು. ಅಲ್ಲಿಂದ ರಾಜಾಂಗಣಕ್ಕೆ ಮೆರವಣಿಗೆಯಲ್ಲಿ ಸಾಧುಸಂತರನ್ನು ಬರಮಾಡಿಕೊಂಡರು. ವಿಶೇಷಾಲಂಕೃತ ವೇದಿಕೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಲಾಪಕ್ಕೆ ಚಾಲನೆ ನೀಡಲಾಯಿತು.


ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೂ ಅದು ಇಡೀ ದೇಹಕ್ಕೆ ಸಂಬಂಧ ಪಡುವಂತೆ ದೇಶದ ಯಾವುದೇ ಭಾಗಕ್ಕೆ ತೊಂದರೆಯಾದರೂ ಅದು ಇಡೀ ದೇಶದ ಸಮಸ್ಯೆ ಎಂದು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಏಕಾತ್ಮತಾ ದಿನ ಬಹಳ ಮುಖ್ಯವಾಗುತ್ತದೆ. ಅಯೋಧ್ಯೆ ಉತ್ತರ ಭಾರತದ್ದಾದರೂ ದಕ್ಷಿಣ ಭಾರತದವರೂ ರಾಮನ ಭಕ್ತರಾಗಿ ಸಕ್ರಿಯರಾಗಬೇಕು ಎಂದು ಶ್ರೀ ಪೇಜಾವರ ಶ್ರೀಗಳು ಕರೆ ನೀಡಿದ್ದರು.

Advertisement

ಗಂಗಾ: ಅಂದು, ಇಂದು…
ಗಂಗಾ ಶುದ್ಧೀಕರಣಕ್ಕೆ ಮುಂದಾದ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಪೇಜಾವರ ಶ್ರೀಗಳವರು ಅಭಿನಂದಿಸಿ, ಗಂಗೆಯ ಶುದ್ಧೀಕರಣದಿಂದ ಸಮಾಜವೂ ಶುದ್ಧೀಕರಣವಾಗುತ್ತದೆ ಎಂದಿದ್ದರು. ಈಗ ಗಂಗಾ ಶುದ್ಧೀಕರಣಕ್ಕಾಗಿ ಸಚಿವಾಲಯವನ್ನು ತೆರೆಯ
ಲಾಗಿದೆ. ಇತ್ತೀಚಿನವರೆಗೂ ಪೇಜಾವರ ಶ್ರೀಗಳ ಶಿಷ್ಯೆಯಾದ ಉಮಾಶ್ರೀ ಭಾರತಿಯವರು ಗಂಗಾ ಶುದ್ಧೀಕರಣ ಸಚಿವಾಲ
ಯದ ಸಚಿವರಾಗಿದ್ದುದು ಕಾಕತಾಳೀಯ.

ಆಗಿನ ಧರ್ಮ  ಸಂಸದ್‌ ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ನಡೆಯುತ್ತಿತ್ತಾದರೂ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವುದನ್ನು ಪ್ರಶ್ನಿಸಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಮಂದಿರದ “ಬೀಗ ತೆಗೆಯಿರಿ’ (“ತಾಲಾ ಖೋಲೋ’), “ಮಂದಿರವನ್ನು ಅಲ್ಲಿಯೇ ನಿರ್ಮಿಸುವೆವು’ (“ಮಂದಿರ್‌ ವಹೀ ಬನಾಯೇಂಗೇ’) ಎಂಬ ಘೋಷಣೆ ಹೊರಡಿಸಲಾಯಿತು. ಈ ಶಬ್ದ ಕೋಟಿ ಕೋಟಿ ಜನರ ಬಾಯಲ್ಲಿ ಹರಿದಾಡಿತು. ಶಿವರಾತ್ರಿಯೊಳಗೆ ಬೀಗ ತೆಗೆಯಬೇಕು ಎಂದು ಅಧಿವೇಶನ ಒತ್ತಾಯಿಸಿತು. ಇದಾದ ಬಳಿಕ ಕೇಂದ್ರ ಸರಕಾರ ಮಂದಿರದ ಬೀಗ ತೆಗೆದು ರಾಮನ ದರ್ಶನವನ್ನು ಸಾರ್ವಜನಿಕರಿಗೆ ಒದಗಿಸಿತು.

ಆಗ ಆದಿಜಾಂಬವ ಸ್ವಾಮಿಗಳು, ಈಗ ಮಾದಾರ ಚೆನ್ನಯ್ಯ ಸ್ವಾಮಿಗಳು 2ನೇ ಧರ್ಮ ಸಂಸದ್‌ ಅಧಿವೇಶನದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಶ್ರೀ ಆದಿ ಜಾಂಬವ ಮಠದ ಶ್ರೀ ರುದ್ರಾಕ್ಷಿಮಣಿ ದೇಶಿಕೇಂದ್ರ ಸ್ವಾಮಿಗಳು ಪಾಲ್ಗೊಂಡು ಸಂದೇಶ ನೀಡಿದ್ದರೆ ಈಗ ಶ್ರೀ ಮಾದಾರ ಚೆನ್ನಯ್ಯ ಸ್ವಾಮಿಗಳು ಸಂದೇಶ ನೀಡಲಿದ್ದಾರೆ.

ಯೋಗ  ಅಂದಿನ ನಿರ್ಣಯ, ಇಂದಿನ ಮಟ್ಟ
ದೇಶದ ಏಕತೆ, ಸಮಗ್ರತೆಗೆ 1985ರ ಅಧಿವೇಶನ ನಿರ್ಣಯ ಕೈಗೊಂಡಿತ್ತು. ಸುಮಾರು 100 ದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿದ್ದ ಹಿಂದೂಗಳ ಜನಸಂಖ್ಯೆ ಕ್ರಮೇಣ ಇಳಿಮುಖವಾಗಿತ್ತು ಎಂದು ಸಮ್ಮೇಳನ ಕಳವಳ ವ್ಯಕ್ತಪಡಿಸಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಂಡ ಯೋಗ ಶಿಕ್ಷಣ ಕುರಿತು ಅಂದಿನ ಧರ್ಮಸಂಸದ್‌ ನಿರ್ಣಯ ತಳೆದಿತ್ತು. ಯೋಗದ ತರಬೇತಿಗಳನ್ನು ನೀಡಬೇಕು, ಶಾಲೆಗಳಲ್ಲಿ ಸಂಸ್ಕೃತ ಮತ್ತು ಯೋಗ ಶಿಕ್ಷಣ ನೀಡಬೇಕು ಎಂದು ಕರೆ ನೀಡಲಾಯಿತು. ಹಿಂದುಳಿದವರು, ದಲಿತರ ಮೇಲೆ ದಬ್ಟಾಳಿಕೆ, ಅವಮಾನ ನಡೆಯದಂತೆ ನೋಡಿಕೊಳ್ಳಬೇಕು ಎಂಬ ನಿರ್ಣಯವನ್ನು ಸ್ವೀಕರಿಸಲಾಗಿತ್ತು. ಮತಾಂತರ ತಡೆಯಲು ಕಾರಣವಾದ ಬಡತನ ನಿವಾರಣೆಗೆ, ಆರ್ಥಿಕ ಸಶಕ್ತೀಕರಣಕ್ಕೆ ಗಮನ ಹರಿಸಬೇಕು ಎಂಬ ನಿರ್ಣಯವಿತ್ತು. ಈ ಎಲ್ಲ ನಿರ್ಣಯಗಳನ್ನು ಸ್ವಾಮೀಜಿಯವರು “ಓಂ’ಕಾರದ ಮೂಲಕ ಅಂಗೀಕರಿಸಿದರು.

Advertisement

ಅಂದಂದಿನ ಸಂಘಟಕರು
1969 ಮತ್ತು 1985ರಲ್ಲಿ  ವಿಹಿಂಪ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿಯಾದ ಬೆಳಗಾವಿ ಮೂಲದ ಸದಾನಂದ ಕಾಕಡೆ, ರಾಜ್ಯದ ಸಂಘಟನ ಕಾರ್ಯದರ್ಶಿ ಭಾವೂರಾವ್‌ ದೇಸಾಯಿ, ಶಿವಮೊಗ್ಗದ ನರಸಿಂಹಮೂರ್ತಿ ಅಯ್ಯಂಗಾರ್‌, 1985ರಲ್ಲಿ  ಅಶೋಕ್‌ ಸಿಂಘಲ್‌ ಪಾಲ್ಗೊಂಡಿದ್ದರು. 1969ರಲ್ಲಿ  ಉಡುಪಿಯಲ್ಲಿ ಆರು ತಿಂಗಳು ಮೊಕ್ಕಾಂ ಹೂಡಿ ಪ್ರಾಂತ ಸಮ್ಮೇಳನವನ್ನು ಆರೆಸ್ಸೆಸ್‌
 ಹಿರಿಯ ಪ್ರಚಾರಕ್‌ ಕೃ. ಸೂರ್ಯನಾರಾಯಣ ರಾವ್‌ ಸಂಘಟಿಸಿದ್ದರೆ, 1985ರಲ್ಲಿ ಆ ಜವಾಬ್ದಾರಿಯನ್ನು ನ. ಕೃಷ್ಣಪ್ಪ ವಹಿಸಿದ್ದರು. ಈಗ ಸಂಘಟನೆಯ ಜವಾಬ್ದಾರಿಯನ್ನು ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್‌ ವಹಿಸಿಕೊಂಡಿದ್ದಾರೆ. 1969ರಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ  ಡಾ| ಡಿ. ವೀರೇಂದ್ರ ಹೆಗ್ಗಡೆಯವರು 2017ರ ಧರ್ಮಸಂಸದ್‌ನಲ್ಲಿಯೂ ಅಧ್ಯಕ್ಷರು. 1985ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಅಂಬಲಪಾಡಿ ಕೃಷ್ಣ ರಾವ್‌ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು.

1969ರ ವಿಹಿಂಪ ಪ್ರಾಂತ ಸಮ್ಮೇಳನದಲ್ಲಿ ಆರೆಸ್ಸೆಸ್‌ ಸರಸಂಘಚಾಲಕರಾಗಿದ್ದ  ಗುರೂಜಿ ಗೋಳವಲ್ಕರ್‌, 1985ರ  ಧರ್ಮ ಸಂಸದ್‌ ಅಧಿವೇಶನದಲ್ಲಿ   ಮೂರನೇ  ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್‌ ದೇವರಸ್‌ ಭಾಗವಹಿಸಿದ್ದರು. 2017ರ ಧರ್ಮಸಂಸದ್‌ನಲ್ಲಿ ಪ್ರಸಕ್ತ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಪಾಲ್ಗೊಳ್ಳುವರು. 1985ರಲ್ಲಿ  ಪಾಲ್ಗೊಂಡ 850 ಸ್ವಾಮೀಜಿಯವರಿಗೆ ನಿರ್ಣಯಗಳು, ಉಪನ್ಯಾಸಗಳು ಭಾಷಾಂತರವಾಗಿ ಕೇಳಬೇಕೆಂಬ ಇಯರ್‌ ಫೋನ್‌ ಅಳವಡಿಸುವುದೆಂದು ನಿರ್ಧಾರವಾಗಿತ್ತು. ಆದರೆ ಅದು ಕೈಗೂಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next