Advertisement

ಕೋವಿಡ್ ಲಾಕ್‌ಡೌನ್ ಆದ ಬೆಳಪು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ

06:29 PM Jun 02, 2021 | Team Udayavani |

ಕಾಪು : ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಿರುವ ಬೆಳಪು ಗ್ರಾಮ ಪಂಚಾಯತ್‌ಗೆ ಬುಧವಾರ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

ಬೆಳಪು ಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಮದ ಗಡಿಭಾಗಗಳಲ್ಲಿ ಗಡಿ ವೀಕ್ಷಣೆ ನಡೆಸಿದರು. ಗಡಿ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗಡಿ ಭಾಗದ ಮೂಲಕ ಅನಗತ್ಯವಾಗಿ ಒಳ ಬರುವ ವಾಹನಗಳನ್ನು ಸೀಝ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಕೊರೊನಾ ಬಾಧಿತರ ಸಂಖ್ಯೆ 50 ತಲುಪಿದ ಗ್ರಾಮಗಳನ್ನು ಸೀಲ್‌ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಜೂ. 2ರಿಂದ ಜೂ. 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್ ಪ್ರದೇಶಗಳಳ್ಲಿ ಕೇವಲ ಹಾಲು ಮತ್ತು ಮೆಡಿಕಲ್ ಸಂಬಂಧಿತ ವಸ್ತುಗಳ ಮಾರಾಟಕ್ಕೆ ಮಾತ್ರಾ ಅವಕಾಶ ಮಾಡಿಕೊಡಲಾಗಿದೆ.

ಬೆಳಪು ಗ್ರಾ.ಪಂ. ಉಪಾಧ್ಯಕ್ಷ ಶರತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಹೆಚ್. ಆರ್. ರಮೇಶ್, ಗ್ರಾಮ ಕರಣಿಕ ಗಣೇಶ್ ಮೇಸ್ತ, ಶಿರ್ವ ಪೊಲೀಸ್ ಠಾಣಾ ಎಎಸ್‌ಐ ಕೃಷ್ಣ ಆಚಾರ್ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಶಿಶು ಕದ್ದು ಬಾಗಲಕೋಟೆ ದಂಪತಿಗೆ ಮಾರಿದ್ದ ವೈದ್ಯೆ ಸೆರೆ

Advertisement

ಟಾಸ್ಕ್‌ಫೋರ್ಸ್ ಸಭೆ : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಭಟ್ ಅವರ ಅಧ್ಯಕ್ಷತೆಯಲ್ಲಿ ತುರ್ತು ಟಾರ್ಸ್‌ಫೋರ್ಸ್ ಸಭೆ ನಡೆಸಲಾಯಿತು. ಕೊರೊನಾಂತಕದ ನಡುವೆಯೂ ಬೆಳಪು ಇಂಡಸ್ಟಿ ಯಲ್ ಏರಿಯಾ, ಸೈಯನ್ಸ್ ಸೆಂಟರ್ ಸಹಿತ ವಿವಿಧ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ರಾ. ಪಂ. ಮಾಜಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರು ಒತ್ತಾಯಿಸಿದರು. ಗ್ರಾ. ಪಂ. ಅಭಿವೃದ್ಧಿ ಆಧಿಕಾರಿ ಎಚ್. ಆರ್. ರ,ಮೇಶ್ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯೊಂದಿಗೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವವರಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನೊಟೀಸ್ ಜಾರಿ ಮಾಡಾಗಿದೆ. ಪಣಿಯೂರು ಜಂಕ್ಷನ್, ಪಕೀರಣಕಟ್ಟೆ ಜಂಕ್ಷನ್, ಕಳತ್ತೂರು, ಮೂಳೂರು ಮತ್ತು ಪೊಲ್ಯ ರಸ್ತೆಗಳಲ್ಲಿ ತಡೆಬೇಲಿಗಳನ್ನು ಹಾಕಿ ಲಾಕ್‌ಡೌನ್ ಪರಿಣಾಮಕಾರಿ ಜಾರಿಯ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಶರತ್ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next