Advertisement
ಜಿಲ್ಲೆಯ ಪಡುಬಿದ್ರಿ, ಕೋಟ ಪಡುಕರೆ ಹಾಗೂ ಮರವಂತೆ ನಾಗಬನ ಬಳಿ 5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಆಗಬೇಕಿತ್ತು. ಅವುಗಳಿಗೆ ಅನುಮೋದನೆ ಸಿಕ್ಕು ವರ್ಷವೇ ಕಳೆಯುತ್ತಿದೆ. ಈ ಮಧ್ಯೆ ಅದೇ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಾದರೆ ಕಾಮಗಾರಿ ವಿಳಂಬಕ್ಕೆ ಸಿಆರ್‌ಝಡ್ ನಿಯಮ ಕಾರಣವೋ ಅಥವಾ ಹೆಚ್ಚುವರಿ ಅನುದಾನ ಪಡೆಯುವ ತಂತ್ರವೋ ಎಂಬ ಸಂಶಯ ವ್ಯಕ್ತವಾಗಿದೆ.
Related Articles
ಕಳೆದ ವರ್ಷದ ಕಾಮಗಾರಿ ಬಾಕಿ ಇರುವಾಗಲೇ ಮೀನುಗಾರಿಕೆ, ಬಂದರು ಇಲಾಖೆಯಿಂದ ಈ ವರ್ಷ ಆಗಬೇಕಿರುವ ತುರ್ತು ಕಾಮಗಾರಿಗೆ 5 ಕೋ.ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ.
Advertisement
ಬೈಂದೂರು ತಾಲೂಕಿನ ಪಡುವರಿ, ಆದ್ರಗೋಳಿ (ಎರಡು ಕಾಮಗಾರಿ), ಹೊಸಹಿತ್ಲು, ಆಕಳಬೈಲು, ಮರವಂತೆ (ಮೂರು ಕಾಮಗಾರಿ) ಸೇರಿ 8 ಕಡೆಗಳಲ್ಲಿ ಕಡಲ್ಕೊರೆತ ಪ್ರತಿಬಂಧಿಸಲು ತುರ್ತು ತಡೆಗೋಡೆ ನಿರ್ಮಿಸಲು ತಲಾ 25 ಲಕ್ಷದಂತೆ 2 ಕೋ.ರೂ., ಕುಂದಾಪುರ ತಾಲೂಕಿನ ತ್ರಾಸಿ, ಗುಜ್ಜಾಡಿಯಲ್ಲಿ ಕಡಲ್ಕೊರೆತ ತಡೆಗೆ 2 ಕಾಮಗಾರಿಗೆ ತಲಾ 25 ಲಕ್ಷ ರೂ., ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನ (2 ಕಾಮಗಾರಿ), ಹೊಸಬೆಂಗ್ರೆಯಲ್ಲಿ ತಡೆಗೋಡೆ ನಿರ್ಮಿಸಲು 3 ಕಾಮಗಾರಿಗೆ ತಲಾ 25 ಲಕ್ಷ ರೂ.,ಉಡುಪಿ ತಾಲೂಕಿನ ಉದ್ಯಾವರ ಪಡುಕರೆಯಲ್ಲಿ ತಡೆಗೋಡೆ ಕಾಮಗಾರಿಗೆ 25 ಲಕ್ಷ ಮತ್ತು ಕಾಪು ತಾಲೂಕಿನ ಕೈಪುಂಜಾಲ್, ಮೂಳೂರು ತೊಟ್ಟಂ (2 ಕಾಮಗಾರಿ), ಪಡುಬಿದ್ರಿ (3 ಕಾಮಗಾರಿ) ಸೇರಿ 6 ಕಾಮಗಾರಿಗೆ ತಲಾ 25 ಲಕ್ಷ ರೂ. ಕೋರಲಾಗಿದೆ. ಹಳೇ ಕಾಮಗಾರಿಗೇ ಹೊಸ ಪ್ರಸ್ತಾವನೆ
2022-23ರಲ್ಲಿ ಕಾಮಗಾರಿ ಆಗಬೇಕಿರುವಲ್ಲಿ ಇನ್ನೂ ತಡೆಗೋಡೆ ಅಥವಾ ರಸ್ತೆ ನಿರ್ಮಾಣ ಆರಂಭವಾಗಿಲ್ಲ. ಈ ವರ್ಷವೂ ಮರವಂತೆ, ಪಡುಬಿದ್ರಿ ಹಾಗೂ ಕೋಟ ಪಡುಕರೆಯಲ್ಲಿ ರಸ್ತೆ ದುರಸ್ತಿ ಹಾಗೂ ರಸ್ತೆ ಸಂರಕ್ಷಣೆಗೆ ಮತ್ತೆ ಅನುದಾನ ಕೋರಲಾಗಿದೆ. ಮರವಂತೆ ಹಾಗೂ ಪಡುಬಿದ್ರಿಯಲ್ಲಿಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಗೂ ಯೋಜನೆ ರೂಪಿಸಲಾಗಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ. ಸಿಆರ್‌ಝಡ್ ಸಮಸ್ಯೆಯಿಂದ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ಸಹಿತ ಸಮುದ್ರ ಕಿನಾರೆಯಲ್ಲಿ ಹಲವು ಕಾಮಗಾರಿಗಳಿಗೆ ಅಡಚಣೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ಮಂಕಾಳ ವೈದ್ಯ,ಮೀನುಗಾರಿಕೆ ಮತ್ತು ಬಂದರು ಸಚಿವ ರಾಜು ಖಾರ್ವಿ ಕೊಡೇರಿ