Advertisement

Udupi; ರಾಜ್ಯ ಶಾರ್ಟ್‌ ಕೋರ್ಸ್‌ ಈಜು ಸ್ಪರ್ಧೆಗೆ ಚಾಲನೆ

11:26 PM Dec 07, 2023 | Team Udayavani |

ಉಡುಪಿ: ರಾಜ್ಯ ಈಜು ಅಸೋಸಿಯೇಶನ್‌ ವತಿಯಿಂದ ಅಜ್ಜರಕಾಡು ಜಿಲ್ಲಾ ಈಜುಕೊಳದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ 23ನೇ ರಾಜ್ಯ ಶಾರ್ಟ್‌ ಕೋರ್ಸ್‌ ಈಜು ಸ್ಪರ್ಧೆಗೆ ಗುರುವಾರ ಚಾಲನೆ ನೀಡಲಾಯಿತು. ಈ ಸ್ಪರ್ಧೆ ಡಿ.10ರವರೆಗೆ ನಡೆಯಲಿದೆ.

Advertisement

14, 17 ಮತ್ತು 19 ವರ್ಷ ಕೆಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 480 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಫ್ರಿ ಸ್ಟೈಲ್‌ನಲ್ಲಿ 25, 50, 100, 200, 400, 800 ಹಾಗೂ 1500 ಮೀಟರ್‌, ಉಳಿದ ಸ್ಟ್ರೋಕ್‌ನ‌ಲ್ಲಿ 50, 100,200 ಮೀಟರ್‌ ಈಜು ಸ್ಪರ್ಧೆ ಏರ್ಪಡಿಸಲಾಗಿದೆ.

ಮುಕ್ತ ವಿಭಾಗದಲ್ಲೂ ಭಾಗವಹಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಡಿ.27ರಿಂದ 29ರ ವರೆಗೆ ಬೆಂಗಳೂರಿನಲ್ಲಿ ನಡೆಯುವ ಏಳು ರಾಜ್ಯಗಳ ದಕ್ಷಿಣ ವಲಯ ಈಜು ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ಉಡುಪಿ, ದ.ಕ., ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಡ್ಯ ಸಹಿತ ವಿವಿಧ ಜಿಲ್ಲೆಗಳಿಂದ 460 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.

ಈ ಸಂದರ್ಭ ರಾಜ್ಯ ಈಜು ಅಸೋಸಿಯೇಶನ್‌ ಉಪಾಧ್ಯಕ್ಷ ರಕ್ಷಿತ್‌ ಜಗದಾಳೆ, ಈಜು ಅಭಿವೃದ್ಧಿ ಅಧಿಕಾರಿ ರೋಹಿತ್‌ ಬಾಬು, ಈಜು ತರಬೇತುದಾರರಾದ ಲೋಕರಾಜ್‌, ಬೃಜೇಶ್‌, ಸ್ಕಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next