Advertisement
ಪ್ರಸ್ತುತ 2018ರ ಪರ್ಯಾಯಕ್ಕೆ 3,800 ಕಿಲೋ ಮಟ್ಟುಗುಳ್ಳ ಹೊರೆ ಕಾಣಿಕೆ ರೂಪದಲ್ಲಿ ನೀಡಲ್ಪಡಲಿದೆ. 2016ರ ಪರ್ಯಾಯದ ಸಂದರ್ಭ ಗುಳ್ಳ ಬೆಳೆ ಅಭಾವ ಇದ್ದು, 2,300 ಕಿಲೋ ಸಂದಾಯ ಆಗಿರುತ್ತದೆ. 2014ರಲ್ಲಿ 3,000ಕಿಲೋ ಸೇವಾ ರೂಪದಲ್ಲಿ ನೀಡಲಾಗಿತ್ತು ಶ್ರೀ ಮಠಕ್ಕೆ ಈ ಬಾರಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಮೂಲಕ 85 ಬೆಳೆಗಾರರು ಬೆಳೆದ ಮಟ್ಟುಗುಳ್ಳದ ತಲಾ 25-30 ಕಿಲೋ ಮತ್ತು ಇತರ ಸೇವಾರ್ಥಿಗಳ ಸಹಕಾರದಿಂದ ಒಟ್ಟು 3,800 ಕಿಲೋ ಮಟ್ಟುಗುಳ್ಳ ಸಂದಾಯವಾಗಲಿದೆ ಎಂಬುದು ಸಂಗ್ರಹಿತ ಮಾಹಿತಿ.
ಮಟ್ಟು ಗ್ರಾಮದಿಂದ ಕೈಪುಂಜಾಲುವರೆಗಿನ ಸುಮಾರು 106 ಎಕರೆ ಪ್ರದೇಶದ ಗದ್ದೆಯ ಮಟ್ಟುಗುಳ್ಳ ಈ ಬಾರಿ ಮಟ್ಟು ಬೆಳೆಗಾರರ ಸಂಘಕ್ಕೆ ಬಂದು ಗ್ರೇಡಿಂಗ್ ಆಗಿ ಸ್ಟಿಕ್ಕರ್ ರಹಿತವಾಗಿ ಹೊರೆಕಾಣಿಕೆಯ ರೂಪದಲ್ಲಿ ಜ.16ರ ಂದು ಅರ್ಪಿಸಲಾಗುತ್ತಿದೆ. ಟಿ.ವಿ. ರಾವ್ ನೇತೃತ್ವದಲ್ಲಿ ಈ ಹೊರೆಕಾಣಿಕೆ ಮೆರವಣಿಗೆ ಸಾಗುತ್ತಿತ್ತು. ಅವರ ನಿಧನದ ನಂತರ ಮಟ್ಟು ಗ್ರಾಮಸ್ಥರು, ಡಾ| ಟಿ.ಎಸ್. ರಾವ್, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಟ್ಟು, ಗುಳ್ಳ ಬೆಳೆಗಾರರು ಸೇರಿಕೊಂಡು 400-500 ಜನರು ಮಟ್ಟುಗುಳ್ಳ ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಬಾರಿಯ ಮೆರವಣಿಗೆ ನಡೆಯಲಿದೆ ಎಂದು ಸಂಘದ ವ್ಯವಸ್ಥಾಪಕ ಲಕ್ಷ್ಮಣ್ ಮಟ್ಟು ವಿವರ ನೀಡಿದ್ದಾರೆ.
Related Articles
Advertisement
ಇದೀಗ ಜಿಐ ಮಾನ್ಯತೆ ಇಲ್ಲಿನ ಕೃಷಿಕರು ಭತ್ತದ ಬೆಳೆಯನ್ನು ಬೆಳೆಯುವ ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೆ„ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಸೆಪ್ಟೆಂಬರ್ ತಿಂಗಳಲ್ಲಿ ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮೃದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ(ಸ್ಟಿಕ್ಕರ್)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತದೆ. ವಾಡಿಕೆಯಂತೆ ಪ್ರಥಮ ಬೆಳೆ ಶ್ರೀಕೃಷ್ಣ ಮಠಕ್ಕೆ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀವಾದಿರಾಜ ಯತಿಗಳು ಅನುಗ್ರಹಿಸಿಕೊಟ್ಟ ಮುಷ್ಟಿ ಬೀಜದಿಂದ ಸಷ್ಟಿಯಾದ ಮಟ್ಟುಗುಳ್ಳ ಎನ್ನುವುದು ಪ್ರತೀತಿ. ಮಟ್ಟುಗುಳ್ಳವನ್ನು ವಾಡಿಕೆಯಂತೆ ಪ್ರಥಮ ಬೆಳೆಯನ್ನು ಶ್ರೀಕೃಷ್ಣಮಠಕ್ಕೆ ಅರ್ಪಿಸಿ ಕೃತಾರ್ಥರಾಗುತ್ತಾರೆ. ಉಡುಪಿ ಶ್ರೀಕೃಷ್ಣಮಠದಲ್ಲಿ ವರ್ಷಂಪ್ರತಿ ನಡೆಯುವ ಮಕರಸಂಕ್ರಾಂತಿ ಉತ್ಸವಕ್ಕೆ ಮಟ್ಟುಗುಳ್ಳವನ್ನು ಕೃಷಿಕರು ತಪ್ಪದೇ ಸಮರ್ಪಿಸುತ್ತಾರೆ. ಅದೇ ರೀತಿ ಎರಡು ವರ್ಷಕ್ಕೊಮ್ಮ ಜರಗುವ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದಂದು ಹಸಿರು ಹೊರೆಕಾಣಿಕೆ ರೂಪದಲ್ಲಿ ಹೇರಳವಾಗಿ ಮಟ್ಟುಗುಳ್ಳ ಸಹಿತ ಅಕ್ಕಿಯನ್ನು ಸಮಸ್ತ ಮಟ್ಟು ಗ್ರಾಮಸ್ಥರು ಕೂಡಿಕೊಂಡು ಸುಮಾರು 500 ವರ್ಷಗಳಿಂದಲೂ ಸಮರ್ಪಿಸಿ ಧನ್ಯತೆ ಮೆರೆಯುತ್ತಿದ್ದಾರೆ. ಮಟ್ಟುಗುಳ್ಳ ಸಮರ್ಪಣೆ
ಉಡುಪಿ ಪರ್ಯಾಯಕ್ಕೆ ಪ್ರತೀ ವರ್ಷ ಗೋಣಿಗಟ್ಟಲೇ ಮಟ್ಟುಗುಳ್ಳವನ್ನು ಸಮರ್ಪಿಸಿಕೊಂಡು ಬರಲಾಗುತ್ತಿದ್ದು, ಅದೇ ರೀತಿಯಲ್ಲಿ ಈ ಬಾರಿಯೂ ಜ. 16ರಂದು ಹೊರೆಕಾಣಿಕೆ ಮೂಲಕ ಗುಳ್ಳವನ್ನು ಸಮರ್ಪಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಬೆಳೆಗಾರರು ತಮ್ಮ ಶಕöನುಸಾರವಾಗಿ ತಾವು ಬೆಳೆಸಿದ ಗುಳ್ಳವನ್ನು ಮಟ್ಟು ಗ್ರಾಮದಲ್ಲಿರುವ ನಿರ್ಧರಿತ ಪ್ರದೇಶಕ್ಕೆ ತಂದು ಸಮರ್ಪಿಸುತ್ತಿದ್ದು ಅಲ್ಲಿಂದ ಜೊತೆ ಸೇರಿ ಬಿರುದಾವಳಿಯೊಂದಿಗೆ ಉಡುಪಿ ಕೃಷ್ಣ ಮಠಕ್ಕೆ ಕೊಂಡೊಯ್ದು ಸಮರ್ಪಿಸಲಾಗುವುದು ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಸಲಹೆಗಾರ ಪರಮೇಶ್ವರ ಅಧಿಕಾರಿ ತಿಳಿಸಿದ್ದಾರೆ. ರಾಕೇಶ್ / ವಿಜಯ್