Advertisement
ಜ. 7ರಿಂದ ರಾಜ್ಯಾದ್ಯಂತ ವಿವಿಧ ಸಂಘಟನೆಗಳು, ದೇವಸ್ಥಾನಗಳಿಂದ ಹೊರೆ ಕಾಣಿಕೆಗಳು ಹರಿದುಬಂದಿದ್ದು ಅದನ್ನು ಉಗ್ರಾಣದಲ್ಲಿ ಶೇಖರಿಸುವ ಕಾರ್ಯವನ್ನು ಬ್ರಾಹ್ಮಣ ಯುವ ಪರಿಷತ್ ನೇತೃತ್ವದಲ್ಲಿ ದೈವಜ್ಞ ಯುವಕ ಮಂಡಲದ ಸದಸ್ಯರು ನೆರವೇರಿಸಿದರೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಘಟಕದವರು ಅದಕ್ಕೆ ಪಾರಂಪರಿಕ ಕೃಷಿ ಸೊಗಡನ್ನು ನೀಡುವುದರೊಂದಿಗೆ ವಿಶೇಷ ಅಂದವನ್ನು ತಂದುಕೊಟ್ಟಿದ್ದರು. ರಾಜ್ಯಾದ್ಯಂತ ಸುಮಾರು 40 ತಂಡಗಳು ಹೊರೆಕಾಣಿಕೆಯನ್ನು ಸಮರ್ಪಿಸಿದ್ದು ವಿಶೇಷವಾಗಿ ಈ ಬಾರಿ ಉಡುಪಿಯ ರಾಜಾ ಛತ್ರಪತಿ ಶಿವಾಜಿ ಸಂಘದವರು ಮೊದಲ ಬಾರಿಗೆ ಹೊರೆಕಾಣಿಕೆಯನ್ನು ಸಮರ್ಪಿಸಿದ್ದಾರೆ.
ಪರ್ಯಾಯ ಮಹೋತ್ಸವಕ್ಕೆ ಕಟಪಾಡಿಯ ಮಟ್ಟು ಪ್ರದೇಶದ ಭಕ್ತರು ಸುಮಾರು 18ಸಾವಿರ ಮಟ್ಟುಗುಳ್ಳವನ್ನು ಹೊರೆಕಾಣಿಕೆಯಾಗಿ ಸಮರ್ಪಿಸಿದರು. ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗಳಿಗೆ ಹಾಗೂ ಭಕ್ತರಿಗೆ ಭೋಜನದ ವ್ಯವಸ್ಥೆಗಾಗಿ ಉಗ್ರಾಣದಲ್ಲಿ ರುವ ಸಾಮಗ್ರಿಗಳನ್ನು ಉಪಯೋಗಿಸುತ್ತಿದ್ದು, ಉಳಿದಂತೆ ಸಾಮಗ್ರಿಗಳನ್ನು ದಿನನಿತ್ಯದ ಭೋಜನಕ್ಕಾಗಿ ಕೃಷ್ಣಮಠದ ಬಡಗು ಮಾಳಿಗೆಯಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಉಗ್ರಾಣದಲ್ಲಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ವಿಷ್ಣುಪ್ರಸಾದ್ ಪಾಡಿಗಾರ್ ಅವರ ಮಾಹಿತಿ. ಪರ್ಯಾಯ ಮಹೋತ್ಸವಕ್ಕೆ ಹೊರಕಾಣಿಕೆ ಸಂಪನ್ನಗೊಂಡಾಗ ಉಗ್ರಾಣದಲ್ಲಿ 1,800 ಕ್ವಿಂಟಾಲ್ ಅಕ್ಕಿ, 5,500 ಕೆ.ಜಿ. ಬೆಲ್ಲ, 25,000 ತೆಂಗಿನ ಕಾಯಿ, 1,800 ಕೆ.ಜಿ. ಸಕ್ಕರೆ, 3,000 ಕೆ.ಜಿ. ಬೇಳೆ, 4,000 ಕುಂಬಳಕಾಯಿ, ಒಂದು ಲೋಡು ಮೈದಾ, ಒಂದು ಲೋಡು ಅರಳು, 1,800 ಕೆ.ಜಿ. ಎಣ್ಣೆ, ಬಾಳೆಗೊನೆಗಳು ವಿಶೇವಾಗಿ 350 ಚೀಲ ಸೌತೆಕಾಯಿ ಹಾಗೂ 3,500 ಕೆ.ಜಿ. ಮಟ್ಟುಗುಳ್ಳ ಸಂಗ್ರಹವಾದರೆ, ಉಳಿದಂತೆ ದ್ರಾಕ್ಷಿ, ಮರಸಣ ಗಡ್ಡೆ, ಅಲಸಂಡೆ, ಟೊಮೇಟೋ, ಹಾಗಲ ಕಾಯಿ, ಅಡಿಕೆ, ಸಿಯಾಳ, ಹೊಸ ಸ್ಟೀಲಿನ ಪಾತ್ರೆಗಳು, ಬೀಳು ಹೆಡಗೆಗಳು, ಕಟ್ಟಿಗೆ ಒಡೆಯುವ ಯಂತ್ರ, ಪಂಚಕಜ್ಜಾಯ ಮಾಡುವ ಯಂತ್ರ ಹೊರೆಕಾಣಿಕೆ ರೂಪದಲ್ಲಿ ಸಮರ್ಪಣೆಯಾಗಿದೆ.
Related Articles
Advertisement