ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಮಾಸೋತ್ಸವ “ಶ್ರೀಕೃಷ್ಣ ಜನ್ಮಾಷ್ಟಮಿ-ಶ್ರೀಕೃಷ್ಣ ಲೀಲೋತ್ಸವ’ ಪ್ರಯುಕ್ತ ರಾಜಾಂಗಣದಲ್ಲಿ ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಆ. 25ರಂದು ಮಂಗಳೂರು ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟ್‌ನ ಡಾ| ಭ್ರಮರೀ ಶಿವಪ್ರಕಾಶ್ ಅವರಿಂದ ಬಣ್ಣಗಳ ಭಾವಲೋಕ ನೃತ್ಯ ಕಾರ್ಯಕ್ರಮ ನೆರವೇರಲಿದೆ (ಚಿತ್ರ: 1).
ಆ. 28ರಂದು ಬೆಂಗಳೂರಿನ ನಾಟ್ಯರತ್ನ ಗುರು ಡಾ| ಸಂಜಯ್ ಶಾಂತಾರಾಮ್ ಮತ್ತು ಶಿವಪ್ರಿಯ ತಂಡದಿಂದ ಶ್ರೀ ಕೃಷ್ಣಾಮೃತ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ (ಚಿತ್ರ: 2).
ಆ. 23ರಂದು ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರಿಂದ “ಜಗದೋದ್ಧಾರನ’ ಕರ್ನಾಟಕ ಸಂಗೀತ ಕಛೇರಿಯಲ್ಲಿ ಜನಾರ್ದನ್ ಶ್ರೀನಾಥ್ ವಯೋಲಿನ್, ಪುತ್ತೂರು ನಿಕ್ಷಿತ್ ಮೃದಂಗ ಹಾಗೂ ಪಯ್ಯನೂರು ಗೋವಿಂದ ಪ್ರಸಾದ್ ಅವರು ಮೋರ್ಸಿಂಗ್‌ನಲ್ಲಿ ಸಾಥ್ ನೀಡಲಿದ್ದಾರೆ (ಚಿತ್ರ: 3).
ಆ. 17ರಂದು ದಾಸವಾಣಿ ಸಂಗೀತ ಕಛೇರಿಯಲ್ಲಿ ರಾಮ್ ರಕ್ಷಿತ್ ವಿ. ಅವರ ಗಾಯನಕ್ಕೆ ಶ್ರೀಪಾದ್ ದಾಸ್ ರಾಯಚೂರ್ ಅವರ ಹಾರ್ಮೋನಿಯಂ, ಗೋಪಾಲ್ ಗುಡಿಬಂಡೆ ಅವರ ತಬಲಾ ವಾದನ ಇರಲಿದೆ (ಚಿತ್ರ: 4).