Advertisement

Udupi ನಾಳೆ ಪುತ್ತಿಗೆ ಶ್ರೀ ಉಡುಪಿ ಪುರಪ್ರವೇಶ

01:01 AM Jan 07, 2024 | Team Udayavani |

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯಪೂರ್ವ ತೀರ್ಥಕ್ಷೇತ್ರಗಳ ಸಂದರ್ಶನ ಮುಗಿಸಿ ಜ. 8ರಂದು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜತೆಯಲ್ಲಿ ಉಡುಪಿ ಪುರಪ್ರವೇಶ ಮಾಡಲಿದ್ದಾರೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್‌. ಎಸ್‌. ಬಲ್ಲಾಳ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್‌ ವಿವರಣೆ ನೀಡಿ, ಜ.8ರ ಮಧ್ಯಾಹ್ನ 3ಕ್ಕೆ ಶ್ರೀಪಾದರು ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಶ್ರೀಪಾದರನ್ನು ಊರ ಪರವೂರ ಗಣ್ಯರು ಸ್ವಾಗತಿಸಿದ ಅನಂತರ ಜೋಡುಕಟ್ಟೆಯಿಂದ ಅಲಂಕೃತ ವಾಹನದಲ್ಲಿ ವೈಭವದ ಮೆರವಣಿಗೆಯಿಂದ ಶ್ರೀ ಕೃಷ್ಣಮಠದವರೆಗೆ ಬರಮಾಡಿಕೊಳ್ಳಲಾಗುವುದು. ಜೋಡುಕಟ್ಟೆ, ಕೆ. ಎಂ. ಮಾರ್ಗ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ಮೆರವಣಿಗೆ ರಥಬೀದಿ ಪ್ರವೇಶಿಸಲಿದೆ.

ಜಾನಪದ, ಸಾಂಸ್ಕೃತಿಕ, ವೇದ ವಾದ್ಯ ಘೋಷ, ವಿವಿಧ ಭಜನ ತಂಡಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಶ್ರೀಪಾದರು ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣ ದರ್ಶನ ಪಡೆದ ಅನಂತರ 6.45ಕ್ಕೆ ಪುತ್ತಿಗೆ ಮಠ ಪ್ರವೇಶಿಸಲಿದ್ದಾರೆ ಎಂದರು.

ಶ್ರೀಪಾದರಿಗೆ ಪೌರಸಮ್ಮಾನ
ಸಂಜೆ 7ಕ್ಕೆ ನಗರಸಭೆ ವತಿಯಿಂದ ರಥಬೀದಿ ಶ್ರೀ ಆನಂದತೀರ್ಥ ವೇದಿಕೆಯಲ್ಲಿ ಪುತ್ತಿಗೆ ಶ್ರೀಪಾದರಿಗೆ ಪೌರ ಸಮ್ಮಾನ ನಡೆಯಲಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಸಮ್ಮಾನ ನೆರವೇರಿಸಲಿದ್ದಾರೆ. ಮುನಿಯಾಲು ಆಯುರ್ವೇದ ಕಾಲೇಜು ಉಪ ಪ್ರಾಂಶುಪಾಲ ಹೆರ್ಗ ಹರಿಪ್ರಸಾದ ಭಟ್‌ ಅಭಿನಂದನ ಭಾಷಣ ಮಾಡಲಿದ್ದಾರೆ. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಯ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

ದಂಡತೀರ್ಥದಿಂದ ದೀಪಾಲಂಕಾರ
ಈ ಬಾರಿ ವಿಶೇಷ ಎಂಬಂತೆ ಪರ್ಯಾಯ ಮಹೋತ್ಸವ ಪ್ರಯುಕ್ತ ಪ್ರಥಮ ಬಾರಿಗೆ ಕಾಪು ದಂಡತೀರ್ಥದಿಂದ ಉಡುಪಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತದೆ. ಹೊರೆ ಕಾಣಿಕೆ ಮೆರವಣಿಗೆ ಜ. 9ರಿಂದ ಆರಂಭಗೊಳ್ಳಲಿದ್ದು, ವಿವಿಧ ಸಂಘ ಸಂಸ್ಥೆಗಳು, ದೇವಾಲಯಗಳು, ಸಾರ್ವಜನಿಕರಿಂದ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next