Advertisement

ಉಡುಪಿ: ಶ್ರೀಕೃಷ್ಣನ ಮುಡಿಗೇರಿದ ಕೈಮಗ್ಗದ ಸೀರೆ

10:41 PM May 08, 2020 | Sriram |

ಉಡುಪಿ: ಶ್ರೀಕೃಷ್ಣಮಠದಲ್ಲಿ ಪ್ರತಿ ಶುಕ್ರವಾರ ಮತ್ತು ನವರಾತ್ರಿಯ ಎಲ್ಲ ದಿನಗಳಲ್ಲಿ ಶ್ರೀಕೃಷ್ಣನಿಗೆ ದೇವಿಯ ಅಲಂಕಾರ ನಡೆಸುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ಈ ಶುಕ್ರವಾರ ಉಡುಪಿ ಕೈಮಗ್ಗದ ಸೀರೆಯನ್ನು ಬಳಸಿ ಲಕ್ಷ್ಮೀದೇವಿಯ ಅಲಂಕಾರವನ್ನು ಮಾಡಿ ಪೂಜಿಸಲಾಯಿತು. ಇದೇ ಪ್ರಥಮ ಬಾರಿ ಕೈಮಗ್ಗದ ಸೀರೆಯನ್ನು ಶ್ರೀಕೃಷ್ಣಮಠದಲ್ಲಿ ಬಳಸಲಾಗಿದೆ.

Advertisement

ನಿತ್ಯವೂ ಕೆಲವು ಪೂಜೆಗಳನ್ನು ಕೆಲವು ಸ್ವಾಮೀಜಿಯವರು ನಡೆಸುತ್ತಾರೆ. ಹಾಗೆ ಅಲಂಕಾರದ ಪೂಜೆಯನ್ನು ನಡೆಸಿದವರು ಶ್ರೀ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು. ಕೈಮಗ್ಗದ ಸೀರೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಬೇಕೆಂಬ ಸಂಕಲ್ಪ ತೊಟ್ಟ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನಡೆಸಿದರು.

ಸ್ಥಳೀಯ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಕೈಮಗ್ಗ, ಕೈಕಸೂತಿ ಕಸುಬುಗಳನ್ನು ಬಲಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇದು ಆರೋಗ್ಯದಾಯಕ ಎನ್ನುತ್ತಾರೆ ಶ್ರೀಈಶಪ್ರಿಯತೀರ್ಥ ಶ್ರೀಪಾದರು.

ಈ ಸೀರೆಯನ್ನು ತಯಾರಿಸಿಕೊಟ್ಟವರು ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದವರು. ಈ ಹಿಂದೆಯೂ ಇವರು ಶ್ರೀಕೃಷ್ಣಮಠಕ್ಕೆ ಕೈಮಗ್ಗದ ಸೀರೆಯನ್ನು ಒದಗಿಸಿದ್ದರು. ಶ್ರೀಕೃಷ್ಣನ ಮುಡಿಗೇರಿದ ಈ ಸೀರೆಯನ್ನು ತಯಾರಿಸಿದವರು ಮಿಜಾರಿನ ಬೂಬ ಶೆಟ್ಟಿಗಾರರು. ಇವರು 65 ವರ್ಷ ಪ್ರಾಯದ ಸಾಧಕ ನೇಕಾರಿಕೆ ಕಸುಬಿನವರು. ಯಾವುದೇ ಕೃತಕ ಬಣ್ಣ ಹಾಕದೆ ನೈಸರ್ಗಿಕ ಬಣ್ಣವನ್ನು ಬಳಸಿ ಈ ಸೀರೆಯನ್ನು ತಯಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next