Advertisement

ಕೃಷ್ಣಾಪುರ ಮಠ ಪರ್ಯಾಯದ ಕಟ್ಟಿಗೆ ಮುಹೂರ್ತ

02:30 AM Jul 12, 2021 | Team Udayavani |

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಮುಂದಿನ ಜ. 18ರಂದು ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ
ತೀರ್ಥ ಶ್ರೀಪಾದರ ನಾಲ್ಕನೆಯ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ರವಿವಾರ ಮೂರನೆಯ ಮುಹೂರ್ತವಾದ ಕಟ್ಟಿಗೆ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

Advertisement

ಮೊದಲು ಕೃಷ್ಣಾಪುರ ಮಠದಲ್ಲಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನವಗ್ರಹ ಪೂಜೆ ನೆರವೇರಿಸಲಾಯಿತು. ಪ್ರಾರ್ಥನೆ ಬಳಿಕ ಕಟ್ಟಿಗೆ ಮೆರವಣಿಗೆಯನ್ನು ಬಿರುದಾವಳಿ, ವಾದ್ಯಘೋಷಗಳ ಜತೆಗೆ ಚಂದ್ರೇಶ್ವರ, ಅನಂತೇಶ್ವರ,ಕೃಷ್ಣ ಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ವೃಂದಾವನ ಸಮುಚ್ಚಯಕ್ಕೆ ತೆರಳಿ ಅಲ್ಲಿಂದ ಮಧ್ವ ಸರೋವರದ ಪಕ್ಕ ದಲ್ಲಿರುವ ಕಟ್ಟಿಗೆ ರಥದ ಸ್ಥಳದಲ್ಲಿ ಪೂಜೆ ನಡೆಸಿ ಮುಹೂರ್ತ ನಡೆಸಲಾಯಿತು. ಪದ್ಮನಾಭ ಮೇಸ್ತ್ರಿಯವರು ಕಟ್ಟಿಗೆ ರಥ ನಿರ್ಮಾಣದ ನೇತೃತ್ವ ವಹಿಸಿಕೊಂಡರು.
ಆಶೀರ್ವಚನ ನೀಡಿದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರು, ಕಟ್ಟಿಗೆ ಮುಹೂರ್ತವು ಭಗವಂತನ ವಿಶಾಲ ದೃಷ್ಟಿಯ ಉಪಾಸನೆಯ ಪ್ರತೀಕ ಎಂದರು.

ಪೂಜೆಯನ್ನು ಗರ್ಭಗುಡಿಯಲ್ಲಿ ಮಾತ್ರ ನೆರವೇರಿಸುವುದಲ್ಲ. ಪರ್ಯಾಯೋತ್ಸವದಲ್ಲಿ ನಡೆಯುವ ಪ್ರತಿಯೊಂದು ವಿಧಿಗೂ ಆರಾಧನೆಯ ಮುಖಗಳಿವೆ. ಅದರಲ್ಲಿ ಒಂದು ಕಟ್ಟಿಗೆ ರಥ. ಇದನ್ನು ಮಳೆಗಾಲದಲ್ಲಿಯೇ ಏಕೆ ಮಾಡಿರಬಹುದು? ಮಳೆ ಗಾಲದಲ್ಲಿ ಜನರಿಗೆ ಕೆಲಸ ಕಡಿಮೆ ಇರುತ್ತದೆ. ಹಿಂದೆ ತಲೆ ಹೊರೆಯಲ್ಲಿ ಕಟ್ಟಿಗೆ ತರುವ ಕ್ರಮವಿತ್ತು. ಒಂದು ಹೊರೆಯನ್ನು ತಂದರೆ ಒಂದು ಸೇರು ಅಕ್ಕಿ ಕೊಡುವ ಕ್ರಮವಿತ್ತು. ಆದರೆ ವಾದಿರಾಜಸ್ವಾಮಿಗಳು ಇದನ್ನು ಮಳೆಗಾಲದಲ್ಲಿ ಮಾಡಿರುವ ಉದ್ದೇಶ ಸಾರ್ವಜನಿಕರಿಗೆ ಆದಾಯ ತರುವ ಮಾರ್ಗಗಳಲ್ಲಿ ಒಂದಾಗಿದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು. ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next