Advertisement

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

11:27 PM May 15, 2024 | Team Udayavani |

ಉಡುಪಿ: ಸ್ಫೂರ್ತಿಧಾಮ ದತ್ತು ಕೇಂದ್ರದಲ್ಲಿ ಅನಾಥ, ನಿರ್ಗತಿಕ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯವು ಆದೇಶಿಸಿದೆ. ಆರೋಪಿಗಳಾದ ಹನುಮಂತ ಮತ್ತು ಕೇಶವ ಕೋಟೇಶ್ವರ ಶಿಕ್ಷೆಗೆ ಒಳಗಾದವರು.

Advertisement

ಕುಂದಾಪುರದ ಸ್ಫೂರ್ತಿಧಾಮದಲ್ಲಿ ಹಲವಾರು ಬಾಲಕ, ಬಾಲಕಿಯರು ಪುನರ್ವಸತಿಯಲ್ಲಿದ್ದು, ಹನುಮಂತ (32) ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಶಾಲೆಯಲ್ಲಿ ಪರಿಚಯಿಸಿಕೊಂಡು ಪ್ರೀತಿಸುವುದಾಗಿ, ಮದುವೆಯಾಗಿ ನಂಬಿಸಿ ಆಕೆ ಶಾಲೆಗೆ ಹೋಗಿ ಬರುವಾಗ ಹಿಂಬಾಲಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2ನೇ ಆರೋಪಿ ಕೇಶವ ಕೋಟೇಶ್ವರನು ಈ ಸಂಸ್ಥೆಗೆ ಭೇಟಿ ನೀಡಿ ನೊಂದ ಬಾಲಕಿಗೆ ಮತ್ತು ಇನ್ನೋರ್ವ ಬಾಲಕಿಗೆ ದೈಹಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಅಂದಿನ ಡಿವೈಎಸ್ಪಿ ಟಿ.ಆರ್‌. ಜೈ ಶಂಕರ್‌ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಒಟ್ಟು 62 ಸಾಕ್ಷಿಗಳಲ್ಲಿ 37 ಸಾಕ್ಷಿಗಳ ವಿಚಾರಣೆ ಮಾಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೋಕೊÕà ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರುಒಂದನೇ ಆರೋಪಿಗೆ ಅತ್ಯಾಚಾರ ಎಸಗಿದ್ದಕ್ಕೆ 10 ವರ್ಷಗಳ ಶಿಕ್ಷೆ ಮತ್ತು 20,000 ರೂ. ದಂಡ, ಅಪ್ರಾಪ್ತ ವಯಸ್ಸಿನ ಬಾಲಕಿಯ ಲೈಂಗಿಕ ದೌರ್ಜನ್ಯಕ್ಕೆ 10 ವರ್ಷ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ..

ಒಟ್ಟು ದಂಡ 50,000 ರೂ. ನಲ್ಲಿ ಸರಕಾರಕ್ಕೆ 10 ಸಾವಿರ ಮತ್ತು 20000 ರೂ. ತಲಾ ನೊಂದ ಬಾಲಕಿಯರಿಗೆ ಪರಿಹಾರವಾಗಿ ನೀಡುವಂತೆ ಮತ್ತು ಸರಕಾರದಿಂದ ಇಬ್ಬರು ನೊಂದ ಬಾಲಕಿಯರಿಗೆ 2,00,000 ರೂ. ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ವಿಶೇಷ ಸ. ಅಭಿಯೋಜಕ ವೈ.ಟಿ. ರಾಘವೇಂದ್ರ ನಡೆಸಿದ್ದು, ಸ. ಅಭಿಯೋಜಕ ಜಯರಾಮ್‌ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next