ಉಡುಪಿ: ನಗರದ ಹಿರಿಯ ಲೆಕ್ಕಪರಿಶೋಧಕರಾದ, ಅಜ್ಜರಕಾಡು ಅಗ್ನಿಶಾಮಕ ದಳ ಕಚೇರಿ ಬಳಿಯ ನಿವಾಸಿ 83 ವರ್ಷದ ಯು.ಕೆ. ಮಯ್ಯ (ಕೃಷ್ಣಮೂರ್ತಿ ಮಯ್ಯ) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಉಡುಪಿ ಜಿಲ್ಲೆಯ ಪ್ರಥಮ ಲೆಕ್ಕಪರಿಶೋಧಕರಾಗಿ ಸೇವೆ ಪ್ರಾರಂಭಿಸಿದ ಇವರು ಉಡುಪಿ ವಿದ್ಯಾರತ್ನ ಕಟ್ಟಡದಲ್ಲಿ ಕಚೇರಿಯನ್ನು ಪ್ರಾರಂಭಿಸಿದ್ದರು. ಇವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಲೆಕ್ಕಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:Karnataka: ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಣಿಪಾಲ ಗ್ರೂಪ್ ಆಫ್ ಸಂಸ್ಥೆಯಲ್ಲಿ ಹಲವಾರು ವರ್ಷಗಳ ಕಾಲ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಉಡುಪಿಯಲ್ಲಿ ಕಚೇರಿ ಪ್ರಾರಂಭಸಿದ್ದರು. ಪ್ರಸ್ತುತ ಪರ್ಯಾಯ ಕೃಷ್ಣಪುರ ಮಠದ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು.
Related Articles
ಮೃತರು ಪತ್ನಿ, ಮೂರು ಗಂಡು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.