Advertisement

ಉಡುಪಿ: ಸೋಮವಾರದಿಂದ ಆರ್‌ಟಿಒ ಕಾರ್ಯಾರಂಭ

09:00 PM Apr 25, 2020 | Sriram |

ಉಡುಪಿ: ಉಡುಪಿಯ ಪ್ರಾದೇಶಿಕ ಸಾರಿಗೆ ಕಚೇರಿ ಈಗ ಖಾಲಿ. ಲಾಕ್‌ಡೌನ್‌ ಪ್ರಯುಕ್ತ ಎಲ್ಲ ಸರಕಾರಿ ಕಚೇರಿಗಳಂತೆ ಈ ಕಚೇರಿಯನ್ನೂ ಮುಚ್ಚಲಾಗಿದೆ. ಹಾಗಿದ್ದರೂ ಇತ್ತೀಚೆಗೆ ಕೆಲವು ನಿರ್ಬಂಧಗಳ ಸಡಿಲಿಕೆಯ ಅನಂತರ ಹೊಸ ವಾಹನ ನೋಂದಣಿಗೆ ಸಂಬಂಧಿಸಿ ಆನ್‌ಲೈನ್‌ ಮುಖಾಂತರ ಹಣ ಪಾವತಿ ಮಾಡಿ ಬಂದರೆ ವಾಹನ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ ವಾಹನ ತಪಾಸಣೆ ಮಾಡಿಸಲು ಬರುವ ವಾಹನ ಮಾಲಕರಿಗೆ ಸೇವೆ ಒದಗಿಸಲು ಓರ್ವ ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಸಹಿತ 2-3 ಸಿಬಂದಿ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

3 ದಿನಗಳ ಹಿಂದೆ ಈ ಸೇವಾ ಸೌಲಭ್ಯ ಆರಂಭವಾಗಿದ್ದು, ಈಗಾಗಲೇ ಕೆಲವು ಮಂದಿ ವಾಹನ ಮಾಲಕರು ಇದರ ಪ್ರಯೋಜನ ಪಡೆದಿದ್ದಾರೆ.

ಸೋಮವಾರದಿಂದ ಕಚೇರಿ ಕಾರ್ಯಾರಂಭ
ಲಾಕ್‌ಡೌನ್‌ ಆರಂಭವಾದಾಗಿನಿಂದ ಮುಚ್ಚಿದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯು ಸೋಮವಾರದಿಂದ ಮತ್ತೆ ಸಾರ್ವಜನಿಕರ ಸೇವೆಗೆ ತೆರೆದುಕೊಳ್ಳಲಿದೆ.

ಸೋಮವಾರದಿಂದ ಹೊಸ ವಾಹನಗಳ ನೋಂದಣಿಗಳು ಮಾತ್ರ ನಡೆಯಲಿವೆ. ಶೇ. 44ರಷ್ಟು ಸಿಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
ಚಾಲನ ಪರವಾನಿಗೆಯ ನವೀಕರಣದ ಅವಧಿಯನ್ನು ಜೂನ್‌ 30ರ ವರೆಗೆ ವಿಸ್ತರಿಸಲಾಗಿದೆ. ಪರವಾನಿಗೆ ಅವಧಿ ಮುಕ್ತಾಯ
ಗೊಂಡಿದ್ದರೂ ಜೂನ್‌ 30ರ ಬಳಿಕ ಪುನರ್‌ನವೀಕರಣ ಮಾಡಬಹುದಾಗಿದೆ.

Advertisement

ಮಾ.31ರ ವರೆಗೆ ಮಾರಾಟವಾದ ಬಿಎಸ್‌4 ಮಾದರಿಯ ವಾಹನಗಳನ್ನು ಎ.30ರವರೆಗೆ ನೋಂದಾಯಿಸಿಕೊಳ್ಳುವಂತೆ ಸೂಚಿಸ ಲಾಗಿದೆ. ಈ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ.

ಬಿಎಸ್‌4 ಮಾದರಿಯ ವಾಹನ ನೋಂದಣಿ
ಹೊಸ ರಿಜಿಸ್ಟ್ರೇಶನ್‌ಗೆ ಸಂಬಂಧಿಸಿ ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಸೇವೆಗೆ ಮಾತ್ರ ಈಗ ಈ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೆಲವು ಮಂದಿ ಮಾಲಕರು ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಿ ವಾಹನವನ್ನು ಈ ಕಚೇರಿಗೆ ತಂದು ತಪಾಸಣೆ ಮಾಡಿಸಿಕೊಂಡು ಹೋಗಿದ್ದಾರೆ. ಮಾ.31ರವರೆಗೆ ಮಾರಾಟವಾದ ಬಿಎಸ್‌4 ಮಾದರಿಯ ವಾಹನಗಳನ್ನು ಎ.30ರವರೆಗೆ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ನೋಂದಣಿ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ.
– ರಾಮಕೃಷ್ಣ ರೈ,ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next