Advertisement

Udupi; ಶಿಕ್ಷಕಿ, ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ ನಿಧನ

03:14 PM Sep 12, 2024 | Team Udayavani |

ಉಡುಪಿ: ಉಡುಪಿಯ ಖ್ಯಾತ ನ್ಯಾಯವಾದಿ ದಿ| ಶಿರ್ತಾಡಿ ವಿಲಿಯಂ ಪಿಂಟೋ ಅವರ ಪತ್ನಿ ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ (72) ಸೆ.12 ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ಅವರು 33 ವರ್ಷಗಳಿಂದ ನಿಟ್ಟೂರು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಮತ್ತು ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕಿಯಾಗಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್‌ನ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಮಹಿಳಾ ಸಂಘಟನೆಯ ಅಧ್ಯಕ್ಷೆಯಾಗಿ, ಚೇತನಾ ಮತ್ತು ಪ್ರಗತಿ ಮಹಿಳಾ ಮಂಡಲಗಳ ಸ್ಥಾಪಕಾಧ್ಯಕ್ಷೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next