ಬನ್ನಂಜೆಯಿಂದ ಬ್ರಹ್ಮಗಿರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಹೊಂಡಗಳಾ ಗಿವೆ. ವಾಹನ ದಟ್ಟಣೆಯಿಂದಾಗಿ ಮೊದಲೇ ಇಕ್ಕಟ್ಟಾದ ಈ ರಸ್ತೆ ಮಳೆಗಾಲಕ್ಕೆ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರತಿ ಮಳೆಗಾಲಕ್ಕೂ ಈ ರಸ್ತೆಯಲ್ಲಿ ಹೊಂಡಗಳುಂಟಾಗುವುದು, ನೀರು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ಇದನ್ನು ಅಗಲಗೊಳಿಸಬೇಕೆಂಬ ಬೇಡಿಕೆ ಕೂಡ ಈಡೇರಿಲ್ಲ.
ಹೆದ್ದಾರಿ ಸಂಪರ್ಕ ರಸ್ತೆ
ಉಡುಪಿ ತಾಲೂಕು ಕಚೇರಿ, ಎಸ್‌ಪಿ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಿಗೆ ರಾಷ್ಟ್ರೀಯ ಹೆದ್ದಾರಿ 66ರಿಂದ ಸಂಪರ್ಕ ಕಲ್ಪಿಸುವ ವಿಶ್ವೇಶ್ವರಯ್ಯ ರಸ್ತೆ ಕೂಡ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಈ ಬಾರಿಯ ಮಳೆಗಾಲಕ್ಕೂ ಇದು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸುತ್ತಿದೆ. ಈ ಭಾಗದವರು ಸುಲಭವಾಗಿ ಹೆದ್ದಾರಿಯನ್ನು ಸಂಪರ್ಕಿಸಲು ಇದು ಉಪಯುಕ್ತವಾಗಿದೆ. ಆದರೆ ಈಗ ಹೊಂಡಗಳು ಮೇಲೆದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.
Advertisement