Advertisement

Udupi; ಗೀತಾರ್ಥ ಚಿಂತನೆ-12; ಅನುಭವಾತ್ಮಕ ಜ್ಞಾನ

12:39 AM Aug 21, 2024 | Team Udayavani |

ಗ್ರಂಥ ರಚಿಸುವಾಗ ಪೀಠಿಕೆ ಸಹಿತವಾಗಿ ಪ್ರತಿಪಾದಿಸುವುದು (ಉಪೋದ್ಘಾತ) ಹಿಂದಿನಿಂದ ಬಂದ ರೂಢಿ. ಗ್ರಂಥ ರಚನೆಯಲ್ಲಿ ಎರಡು ರೀತಿಯಲ್ಲಿ ಅನುಸರಿಸುತ್ತಾರೆ. ಮೊದಲನೆಯದು ಸೂರ್ಯ ಕಿರಣದಂತೆ, ಎರಡನೆಯದು ಚಂದ್ರ ಕಿರಣದಂತೆ. ಸೂರ್ಯನ ಕಿರಣ ಒಂದೇ ರೀತಿಯದ್ದಾದರೆ, ಚಂದ್ರನ ಕಿರಣ ಶುಕ್ಲ ಪಕ್ಷದಲ್ಲಿ ಏರುತ್ತ ಹೋಗುವುದು, ಕೃಷ್ಣ ಪಕ್ಷದಲ್ಲಿ ಇಳಿಯುತ್ತ ಬರುವುದು ಇದೆ. ಗೀತಾ ಭಾಷ್ಯ ಮತ್ತು ಗೀತಾ ತಾತ್ಪರ್ಯವೂ ಹೀಗೆ.

Advertisement

ಭಾಷ್ಯವೆಂದರೆ ಸಂಕ್ಷಿಪ್ತವಾಗಿ ಹೇಳುವುದು (ಚಂದ್ರ ಕಿರಣದಂತೆ), ತಾತ್ಪರ್ಯಗ್ರಂಥದಲ್ಲಿ ವಿಸ್ತಾರವಾಗುತ್ತ ಹೋಗುತ್ತದೆ (ಸೂರ್ಯ ಕಿರಣದಂತೆ). ಕೆಲವು ಬಾರಿ ಸಂಕ್ಷಿಪ್ತವಾಗಿ ಹೇಳುವುದು ಮುಖ್ಯ. ಇದನ್ನು “ದೃಷ್ಟಾತೀತ’ ಎನ್ನುತ್ತಾರೆ. ಆಂಜನೇಯನು ಸೀತೆಯನ್ನು ಪತ್ತೆ ಹಚ್ಚಿ ಬಂದ ಬಳಿಕ ಮೊದಲು ಕೇಳುವ ಪ್ರಶ್ನೆಗಳಿಗೆ “ದೃಷ್ಟಾ’ (ನೋಡಿದ್ದೇನೆ) ಎಂಬ ಒಂದೇ ಶಬ್ದದಲ್ಲಿ ಉತ್ತರಿಸುತ್ತಾನೆ. ಮುಖ್ಯ ವಿಷಯವನ್ನು ಮೊದಲು ಒಂದು ಶಬ್ದದಲ್ಲಿ ಹೇಳಿ ಮತ್ತೆ ವಿವರವಾಗಿ ಮಾತನಾಡುವ ಕ್ರಮವಿದು. ಇದು ಗ್ರಂಥ ರಚನೆಯಲ್ಲಿಯೂ ಇದೆ. ಭಗವದ್ಗೀತೆಯಿಂದ ಜನ್ಯವಾದ ಜ್ಞಾನವೇ ಮೋಕ್ಷ ಸಾಧನ ಎಂದು ಆಚಾರ್ಯರೆಲ್ಲ ಒಪ್ಪಿದ ವಿಷಯ. ಮಹಾಭಾರತವು ಸರ್ವಪಾಪವಿಮೋಚನ ಜ್ಞಾನವಾದರೂ ಅದು ಶಬ್ದಜನ್ಯ ಜ್ಞಾನದಿಂದಲ್ಲ, ಅನುಭವಾತ್ಮಕವಾದ ಜ್ಞಾನದಿಂದ ಆಗಬೇಕು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next