Advertisement
ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿ ಸಿನಿಮಾದ ಬಗ್ಗೆ ಮಾಹಿತಿ ನೀಡಿದೆ. ನಿರ್ಮಾಪಕ ಜಿ ಧನಂಜಯಂ ಅವರು ʼಕಂಗುವʼ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
Related Articles
Advertisement
“ನಾವು ಹೆಚ್ಚು ಉತ್ಸುಕರಾಗಿದ್ದೇವೆ. ತಮಿಳುನಾಡಿನಲ್ಲಿ, 700ಕ್ಕೂ ಹೆಚ್ಚು ಸ್ಕ್ರೀನ್ಗಳನ್ನು ಈಗಾಗಲೇ ಖಚಿತಪಡಿಸಲಾಗಿದೆ. ದಕ್ಷಿಣದಲ್ಲಿ ಮಾತ್ರ, 2,500 ಕ್ಕೂ ಹೆಚ್ಚು ಸ್ಕ್ರೀನ್ಗಳು ಮತ್ತು ಉತ್ತರ ಭಾರತದಲ್ಲಿ ನಾವು ಸುಮಾರು 3,000 ರಿಂದ 3,500 ಸ್ಕ್ರೀನ್ಗಳಲ್ಲಿ ಲಾಕ್ ಮಾಡಿದ್ದೇವೆ. ಎಲ್ಲವನ್ನೂ ಒಟ್ಟುಗೂಡಿಸಿದ್ದೇವೆ. ನಾವು ನವೆಂಬರ್ 14 ರಂದು 10,000 ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ʼಕಂಗುವʼ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲು ತುಂಬಾ ಹೆಮ್ಮೆಪಡುತ್ತೇನೆ ಎಂದು ಸ್ಟುಡಿಯೋ ಗ್ರೀನ್ನ ನಿರ್ಮಾಪಕ ಜಿ ಧನಂಜಯನ್ ಹೇಳಿದ್ದಾರೆ.