Advertisement

ಉಡುಪಿ: ನವರೂಪ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ

06:37 PM Oct 12, 2022 | Team Udayavani |

ಉಡುಪಿ: ನವರೂಪದ ಮೂಲಕ ದೇವಿಯನ್ನು ಆರಾಧಾನೆ ಮಾಡುವುದು ನಮ್ಮ ಹಿರಿಮೆ. ಅಗಾಧ, ಅಮೂಲ್ಯವಾದ ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಡುಪಿಯ ಹೆಜ್ಜೆಗೆಜ್ಜೆ ನೃತ್ಯ ಸಂಸ್ಥೆಯ ನಿರ್ದೇಶಕಿಯಾದ ವಿ ಯಶಾ ರಾಮಕೃಷ್ಣ ಅವರು ಹೇಳಿದರು.

Advertisement

ನವರಾತ್ರಿಯ ಸಂಭ್ರಮದಲ್ಲಿ ಉದಯವಾಣಿ ಹಮ್ಮಿಕೊಂಡಿದ್ದ ನವರೂಪ ಕಾರ್ಯಕ್ರಮದಲ್ಲಿ ಚಿತ್ರ ಕಳುಹಿಸಿ ಅದೃಷ್ಟಶಾಲಿಗಳಾದವರಿಗೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕಲೆ, ಚಿತ್ರಕಲೆ, ಸಾಹಿತ್ಯ ಸಹಿತ ಅನೇಕ ವಿಧವಾದ ನಮ್ಮ ಸಂಸ್ಕೃತಿಯ ಹಿರಿಮಯನ್ನು ಸೃಜನಾತ್ಮಕವಾಗಿ ತಿಳಿಸಬಹುದಾಗಿದೆ. ನವರಾತ್ರಿ ಸಂಭ್ರಮದಲ್ಲಿ ಉದಯವಾಣಿ ನಡೆಸಿದ ನವರೂಪ ಕಾರ್ಯಕ್ರಮವೂ ನಾವೆಲ್ಲರೂ ಒಂದೇ ಎಂಬ ಸಂಸ್ಕೃತಿಯನ್ನು ಸಾಬೀತು ಮಾಡಿದೆ. ನವ ರೂಪದಲ್ಲಿ ಪೂಜಿಸಲ್ಪಡುವ ದೇವಿಗೆ 9 ಹೆಸರುಗಳಲ್ಲಿ ಕರೆಯಲಾಗುತ್ತದೆ. 9 ದಿನವೂ ಒಂದೊಂದು ಬಣ್ಣದ ಸೀರೆಯುಟ್ಟು ಮಹಿಳೆಯರು ಸಂಭ್ರಮಿಸಿದ್ದಾರೆ. ಉದಯವಾಣಿ ನವರೂಪ, ಯಶೋದಾ ಕೃಷ್ಣ ಮೊದಲಾದ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದೆ ಎಂದರು.

ಸಂಪಾದಕರಾದ ಅರವಿಂದ ನಾವಡ ಅವರು ನವರೂಪ ಕಾರ್ಯಕ್ರಮದ ಸ್ಥೂಲ ಪರಿಚಯ ಮಾಡಿದರು. ಮಾರುಕಟ್ಟೆೆ ವಿಭಾಗದ ಉಪಾಧ್ಯಕ್ಷ(ಮ್ಯಾಗಜಿನ್ಸ್‌ ಆ್ಯಂಡ್ ಸ್ಪೆಶಲ್‌ಪ್ರಾಜೆಕ್ಟ್ಸ್‌) ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದವರು. ಮಣಿಪಾಲ ಆವೃತ್ತಿಯ ಸರ್ಕ್ಯೂಲೇಶನ್ ಮ್ಯಾಾನೇಜರ್ ಅಜಿತ್ ಭಂಡಾರಿ ವಿಜೇತರ ಪಟ್ಟಿ ವಾಚಿಸಿದರು. ಮಾರುಕಟ್ಟೆೆ ವಿಭಾಗದ ವಿಭಾಗೀಯ ಮುಖ್ಯಸ್ಥ ರಾಧಾಕೃಷ್ಣ ಭಟ್ ನಿರೂಪಿಸಿದರು.

Advertisement

ಬಹುಮಾನ ವಿಜೇತ ತಂಡ
ಉಡುಪಿ ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕರ ವೃಂದ, ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳದ ಡಾ ಚೈತ್ರಾ ಶೆಟ್ಟಿ ಕುಟುಂಬ ನಿರೇಗುತ್ತು, ಕಾಪು ಪಂಚಶಕ್ತಿ ಭಜನ ಮಂಡಳಿ ಸದಸ್ಯರು, ನಿಟ್ಟೆ ಗ್ರಾಾ.ಪಂ. ಸದಸ್ಯರು, ಉಡುಪಿಯ ಶ್ರುತಿ ಮತ್ತು ಗೆಳತಿಯರು, ಸುಚಿತ್ರಾ ಮತ್ತು ಬಳಗಕ್ಕೆ ವಿ ಯಶಾ ರಾಮಕೃಷ್ಣ ಅವರು ಬಹುಮಾನ ವಿತರಿಸಿದರು.

ವಿಜೇತರ ಅನಿಸಿಕೆ

ಇದೊಂದು ನಮ್ಮ ಜೀವನದ ಅವಿಸ್ಮರಣೀಯ ಗಳಿಗೆ. ನವರಾತ್ರಿಯನ್ನು ಉದಯವಾಣಿಯ ನವರೂಪದೊಂದಿಗೆ ಆಚರಣೆ ಮಾಡಿರುವುದು ತುಂಬ ಖುಷಿಕೊಟ್ಟಿದೆ. ಉದಯವಾಣಿಯಲ್ಲಿ ನಮ್ಮ ಚಿತ್ರ ಬರುವುದನ್ನೇ ಕಾಯುತ್ತಿದ್ದೇವು. ಚಿತ್ರ ಪ್ರಕಟವಾಗಿರುವ ಜತೆಗೆ ಬಹುಮಾನ ಬಂದಿದ್ದು ಇನ್ನಷ್ಟು ಸಂತಸ ತಂದಿದೆ.
– ಉಮಾಶ್ರೀ, ಸರಕಾರಿ ಮಹಿಳಾ ಕಾಲೇಜು ಅಜ್ಜರಕಾಡು

ಭಜನೆ ಮಂಡಳಿಯ ಸದಸ್ಯರುಗಳಾದ ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಿ ಒಂದೊಂದು ದಿನ ಒಂದೊಂದು ಬಣ್ಣದ ಸೀರೆ ಉಡುವುದೇ ಬಹು ಆನಂದವಾಗಿತ್ತು. ದೇವಸ್ಥಾನದಲ್ಲಿ ಎಲ್ಲರವೂ ಒಟ್ಟಾಾಗಿ ಊಟಕ್ಕೆ ಕುಳಿತ ಸಂದರ್ಭದಲ್ಲಿ ಚಿತ್ರ ತೆಗೆದು ಕಳುಹಿಸಿರುವುದು ಕಣ್ಣಿಗೆ ಕಟ್ಟಿದಂತಿದೆ. ಉದಯವಾಣಿ ನವರೂಪ ನಮಗೂ ಹಬ್ಬದ ಉತ್ಸಾಹ ಹೆಚ್ಚಿದೆ.
– ಸಾವಿತ್ರಿ ಗಣೇಶ್, ಪಂಚಶಕ್ತಿ ಭಜನ ಮಂಡಳಿ ಕಾಪು

ಉದಯವಾಣಿ ನವರೂಪ ನಮ್ಮ ಹಬ್ಬದ ಸಡಗರನ್ನು ಇನ್ನಷ್ಟು ಹೆಚ್ಚಿದೆ. ಇದೇ ಮೊದಲ ಬಾರಿಗೆ ನಾವು ನವರೂಪದಲ್ಲಿ ಭಾಗಿಯಾಗಿದ್ದು. ಅದ್ಭುತ ಅನುಭವ. ಮುಂದೆ ಖಂಡಿತಾ ಮಿಸ್ ಮಾಡಿಕೊಳ್ಳುವುದಿಲ್ಲ.
-ಡಾ ಚೈತ್ರಾ ಶೆಟ್ಟಿ, ಕಾರ್ಕಳ ನಿರೇಗುತ್ತು

Advertisement

Udayavani is now on Telegram. Click here to join our channel and stay updated with the latest news.

Next