Advertisement
ಈ ಬಾರಿಯ ಕೃಷ್ಣಾಪುರ ಮಠದ ಪರ್ಯಾಯೋತ್ಸವದ ಕಾಲದ ಸುಗ್ರಾಸ ಭೋಜನಕ್ಕೆ ಸವಿರುಚಿ ನೀಡುವ ಮಟ್ಟುಗುಳ್ಳವು ಮಟ್ಟು ಪ್ರದೇಶದ ಬೆಳೆಗಾರರ ಪರಿಶ್ರಮದ ಸೇವಾ ಬೆಳೆ ಕಾಣಿಕೆಯಾಗಿದೆ.
ಕಳೆದ 2020ರ ಸಾಲಿನ ಅದಮಾರು ಮಠದ ಪರ್ಯಾಯಕ್ಕೆ ಸುಮಾರು 3,000 ಕಿಲೋ ಮಟ್ಟುಗುಳ್ಳವು ಹೊರೆಕಾಣಿಕೆಯ ರೂಪದಲ್ಲಿ ಶ್ರೀ ಮಠಕ್ಕೆ ಸಮರ್ಪಿಸಲಾಗಿತ್ತು. 2018ರ ಪರ್ಯಾಯಕ್ಕೆ 3800 ಕಿಲೋ ಮಟ್ಟುಗುಳ್ಳ ಹೊರೆ ಕಾಣಿಕೆ ರೂಪದಲ್ಲಿ ನೀಡಲ್ಪಟ್ಟಿತ್ತು. 2016ರ ಪರ್ಯಾಯದ ಸಂದರ್ಭ ಮಟ್ಟುಗುಳ್ಳ ಬೆಳೆ ಅಭಾವ ಆಗಿದ್ದು, 2,300 ಕಿಲೋ ಸಂದಾಯ ಆಗಿದೆ. ಸುಮಾರು 1,500 ಕಿಲೋಗೂ ಅಧಿಕ ಪೂರೈಕೆ
ಶ್ರೀ ಮಠಕ್ಕೆ ಈ ಬಾರಿ ಮಟ್ಟುಗುಳ್ಳ ಬೆಳೆ ಗಾರರ ಸಂಘದ ಮೂಲಕ 210 ಬೆಳೆಗಾರರು ಬೆಳೆದ ಮಟ್ಟುಗುಳ್ಳದ ಬೆಳೆಯಿಂದ ಮತ್ತು ಇತರ ಸೇವಾರ್ಥಿಗಳ ಮತ್ತು ಶ್ರೀ ಮಠದ ಅನುಯಾಯಿಗಳ ಸಹಕಾರದಿಂದ ಒಟ್ಟು
ಸುಮಾರು 1,500 ಕಿಲೋವಿಗೂ ಅಧಿಕ ಮಟ್ಟುಗುಳ್ಳ ಸಂದಾಯವಾಗಲಿದೆ.
Related Articles
ಇಲ್ಲಿನ ಕೃಷಿಕರು ಭತ್ತ ಬೆಳೆಯನ್ನು ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೆ„ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಸೆಪ್ಟೆಂಬರ್ ತಿಂಗಳಲ್ಲಿ ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮƒದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ (ಸ್ಟಿಕ್ಕರ್)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಳಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತದೆ.
Advertisement
250 ಎಕರೆ ಪ್ರದೇಶದಲ್ಲಿ ಬೆಳೆ ಮಟ್ಟು , ಪಾಂಗಾಳ, ಕೋಟೆ, ಕೈಪುಂಜಾಲು, ಬ್ಯಾರಿ ತೋಟ, ಮಟ್ಟುಕೊಪ್ಲ, ಅಂಬಾಡಿ ಬೈಲು ಪ್ರದೇಶದ ಸುಮಾರು 250 ಎಕರೆ ಪ್ರದೇಶದ ಗದ್ದೆಯ ಮಟ್ಟುಗುಳ್ಳ ಈ ಬಾರಿ ಶ್ರೀ ಮಠದ ಬೇಡಿಕೆಯನ್ವಯ ಮಟ್ಟು ಬೆಳೆಗಾರರ ಸಂಘದ ಮೂಲಕ ಸಮರ್ಪಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಇಳುವರಿ ಕುಂಠಿತವಾಗಿದ್ದರೂ ವಾಡಿಕೆಯಂತೆ ಮಟ್ಟುಗುಳ್ಳದ ಬೆಳೆಕಾಣಿಕೆಯನ್ನು ನೀಡಲಾಗುತ್ತಿದೆ .
– ಸುನಿಲ್ ಡಿ. ಬಂಗೇರ,
ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ