ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದಲ್ಲಿ ಬೆಳಗ್ಗಿನ ದರ್ಬಾರ್ ಜತೆಗೆ ಸಂಧ್ಯಾ ದರ್ಬಾರ್ ಕೂಡ ಇರಲಿದೆ.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಧಾರ್ಮಿಕ, ಸಾಂಸ್ಕೃತಿಕ ಚಿಂತಕರಿಗೆ ದರ್ಬಾರ್ ಸಮ್ಮಾನದ ಜತೆಗೆ ಸಾಧಕರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಹಿರಿಯ ವಿದ್ವಾಂಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ| ಶ್ರೀನಿವಾಸ ವರಖೇಡಿ, ಹಿರಿಯ ಸಂಶೋಧಕ ಶತಾವಧಾನಿ ವಿದ್ವಾನ್ ರಾಮನಾಥ ಆಚಾರ್ಯ, ಅಮೆರಿಕದ ಹಿರಿಯ ವಿದ್ವಾಂಸ ವಿದ್ವಾನ್ ಕೇಶವ ರಾವ್ ತಾಡಪತ್ರಿ, ಕೇರಳದ ಪ್ರಸಿದ್ಧ ಜೋತಿಷ ವಿದ್ವಾನ್ ಬೇಳ ಪದ್ಮನಾಭ ಶರ್ಮ, ಬೆಂಗಳೂರಿನ ಹಿರಿಯ ವಿದ್ವಾಂಸ ವಿದ್ವಾನ್ ಡಾ| ಎನ್. ವೆಂಕಟೇಶಾಚಾರ್ಯ, ಬೆಂಗಳೂರು ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಮಧು ಪಂಡಿತದಾಸ್, ಇಸ್ಕಾನ್ ಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷ ರೇವತಿ ರಮಣ್ ದಾಸ್, ಮಾಹೆ ಟ್ರಸ್ಟ್ ಅಧ್ಯಕ್ಷ, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್(ಎಂಇಎಂಜಿ) ಮುಖ್ಯಸ್ಥರಾದ ಡಾ| ರಂಜನ್ ಆರ್. ಪೈ, ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಅಶೋಕ ಹಾರ್ನಹಳ್ಳಿ, ಸಮಗ್ರ ಭಗವದ್ಗೀತೆಯನ್ನು ಕಂಠಸ್ಥ ಮಾಡಿರುವ ಮೂರು ವರ್ಷದ ಬಾಲಕಿ ಮೈಸೂರಿನ ಕೋಕಿಲಾ ವೇಮುರಿ, ಅಂಧನಾಗಿಯೂ ಉದ್ಯಮ ನಡೆಸುತ್ತಿರುವ ಬೆಂಗಳೂರಿನ ಮಹಾಂತೇಶ್ ಕಿವುಡ ಸಣ್ಣನವರ್ ಅವರಿಗೆ ಬೆಳಗ್ಗಿನ ದರ್ಬಾರ್ ಸಮ್ಮಾನ ನಡೆಯಲಿದೆ.
ಸಂಧ್ಯಾ ದರ್ಬಾರ್ ಸಮ್ಮಾನ
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ಸಿ.ಎ. ರಾಘವೇಂದ್ರ ರಾವ್, ಮಂಗಳೂರಿನ ಪ್ರಸಿದ್ಧ ಆಗಮಿಕ ವಿದ್ವಾನ್ ಪಂಜ ಭಾಸ್ಕರ ಭಟ್, ಉಡುಪಿಯ ಸಂಸ್ಕೃತ ವಿದ್ವಾಂಸ ವಿದ್ವಾನ್ ಮಧ್ವರಮಣ ಆಚಾರ್ಯ, ಬೆಂಗಳೂರಿನ ಯುವ ವಿದ್ವಾಂಸ ವಿದ್ವಾನ್ ಮಧ್ವೇಶ ಭಟ್ ಅವರಿಗೆ ಸಂಧ್ಯಾ ದರ್ಬಾರ್ ಸಮ್ಮಾನ ಜರಗಲಿದೆ.
ಶ್ರೀಕೃಷ್ಣಾನುಗ್ರಹ ಪ್ರಶಸ್ತಿ
ಕೊಯಮತ್ತೂರಿನ ಉದ್ಯಮಿ ರವಿಶ್ಯಾಮ್, ಉದ್ಯಮಿ ಪ್ರಕಾಶ ಶೆಟ್ಟಿ ಬಂಜಾರ, ಉಡುಪಿಯ ಉದ್ಯಮಿ ಭುವನೇಂದ್ರ ಕಿದಿಯೂರು, ದ.ಕ.ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.