Advertisement

ನಾಳೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯೋತ್ಸವ

06:00 AM Jan 17, 2018 | Harsha Rao |

ಉಡುಪಿ: ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣ ಮಠದಲ್ಲಿ  ಜರಗುವ ಪರ್ಯಾಯೋತ್ಸವ ಗುರುವಾರ ಬೆಳಗ್ಗೆ ನಡೆಯಲಿದೆ. 1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ 31 ಬಾರಿ ನಡೆದಿದೆ. ಈಗ 32ನೇ ಪರ್ಯಾಯ ಚಕ್ರ ಆರಂಭಗೊಳ್ಳುತ್ತಿದೆ. ಪರ್ಯಾಯ ಚಕ್ರ ಆರಂಭಗೊಳ್ಳುವುದು ಶ್ರೀ ಪಲಿಮಾರು ಮಠದಿಂದ.

Advertisement

ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಎರಡನೆಯ ಪರ್ಯಾಯ ಪೂಜೆಯ ಸರತಿಯಲ್ಲಿದ್ದಾರೆ. ಗುರುವಾರ ಮುಂಜಾವ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಇತರ ಮಠಾಧೀಶರೊಂದಿಗೆ ಸಾಗಿ ಬರಲಿದ್ದಾರೆ. ಬೆಳಗ್ಗೆ ಶ್ರೀಕೃಷ್ಣ ದರ್ಶನ ಮಾಡಿ ಪೂಜಾಧಿಕಾರವನ್ನು ವಹಿಸಿಕೊಳ್ಳುವ ಶ್ರೀಪಾದರು ಬಳಿಕ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡುವರು.

ಪೇಜಾವರ ಶ್ರೀಗಳು ತಮ್ಮ ಐತಿಹಾಸಿಕ ಪರ್ಯಾಯ ಪೂಜೆಯ ಅವಧಿಯಿಂದ ನಿರ್ಗಮಿಸುವುದು ಮತ್ತು 32ನೇ ಪರ್ಯಾಯ ಚಕ್ರ ಆರಂಭಗೊಳ್ಳುವುದು ಶ್ರೀಕೃಷ್ಣ ಮಠದ ಮಟ್ಟಿಗೆ ದಾಖಲೆಯ ದಿನವಾಗಿದೆ. ಪಲಿಮಾರು ಶ್ರೀಪಾದರು ಗರ್ಭಗುಡಿಗೆ ಚಿನ್ನದ ತಗಡು ಹೊದೆಸುವುದು, ನಿರಂತರ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ, ಚಿಣ್ಣರ ಸಂತರ್ಪಣೆ ಯೋಜನೆಯ ವಿಸ್ತರಣೆ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next