Advertisement

Udupi: ಆನ್ ಲೈನ್ ಟ್ರೇಡಿಂಗ್ ವಂಚನೆ:  ನಾಲ್ವರು ಆರೋಪಿಗಳ ಬಂಧನ 

09:23 PM Aug 22, 2024 | Team Udayavani |

ಉಡುಪಿ: ಆನ್‌ಲೈನ್‌  ಟ್ರೇಡಿಂಗ್ ನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಪೊಲೀಸರು ಬಂಧಿಸಿ 13 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

Advertisement

ಉಪೇಂದ್ರ ಭಟ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸ್ಯಾಪ್‌ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ ಗೆ ಸೇರಿಸಿದ್ದು, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ ಅಕೌಂಟ್ ನಂಬರ್‌ ನೀಡಿದ್ದಾರೆ. ವಾಟ್ಸ್ಯಾಪ್‌ ನಲ್ಲಿ ಟ್ರೇಡಿಂಗ್  ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಒಟ್ಟು 33,10,000 ಹಣ  ಡೆಪಾಸಿಟ್ ಮಾಡಿದ್ದಾರೆ. ಈ ಬಗ್ಗೆ ಉಪೇಂದ್ರ ಭಟ್ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ವಿಶೇಷ ತಂಡ ರಚಿಸಿ ಆರೋಪಿಗಳಾದ ಪುತ್ತೂರಿನ ಮಹಮ್ಮದ್ ಮುಸ್ತಫಾ ಪಿ. (36), ಕುಂಬ್ಳೆಯ ಖಾಲೆಡ್ಜ್. ಬಿ, (39 ), ಕಾಸರಗೋಡಿನ ಮೊಹಮ್ಮದ್ ಸಫಾನ್ ಕೆ.ಎ., (22) , ಮಂಗಳೂರಿನ ಸತೀಶ್ ಶೇಟ್(22 )ರನ್ನು ವಶಕ್ಕೆ ಪಡೆದು  ಅವರಿಂದ 5 ಮೊಬೈಲ್  ಹಾಗೂ 13 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕ್ರರಣದ ಪ್ರಮುಖ ಸೂತ್ರಧಾರಿಗಳು ತಲೆಮರೆಸಿ ಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅರುಣ್ ಕುಮಾರ್ ಮಾರ್ಗದರ್ಶನದಲ್ಕಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಯ್ಯ ಟಿ.ಎಸ್., ಪರಮೇಶ್ವರ ಹೆಗಡೆ , ಸೆನ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್, ಎಎಸ್ಐ ರಾಜೇಶ್ , ಸಿಬ್ಬಂದಿಗಳಾದ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘವೇಂದ್ರ, ಪ್ರಶಾಂತ್ ಪ್ರಸನ್ನ ಸಿ ಸಲ್ಮಾನ್, ಚಾಲಕ ಸುದೀಪ್  ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next