Advertisement

ಉಡುಪಿ ನಗರಸಭೆ : ವಿಕೋಪಕ್ಕೆ ತಿರುಗಿದ ಅಧಿವೇಶನ

03:45 AM Jun 30, 2017 | |

ಉಡುಪಿ: ನಗರಸಭೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ವಿಷಯವೊಂದರ ಸ್ಪಷ್ಟನೆಗಾಗಿ ನಗರ ಸಭೆಯ ಆಡಳಿತ ಪಕ್ಷದ ಸದಸ್ಯೆ ಗೀತಾ ಶೇಟ್‌ ಅವರು ಕರೆದುಕೊಂಡು ಬಂದಿದ್ದ ನಾಗರಿಕನ ಮೇಲೆ ಆಡಳಿತ ಪಕ್ಷದ್ದೇ ಕೆಲ ಸದಸ್ಯರು ಹಲ್ಲೆಗೈದು ಹೊರ ದಬ್ಬಿದ ಪ್ರಸಂಗ ಗುರುವಾರ ನಡೆದಿದೆ.

Advertisement

ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿ ಸಿರುವ ವಿಪಕ್ಷ ಸದಸ್ಯರು, ನಗರ ಸಭೆ ಇತಿಹಾಸದಲ್ಲಿಯೇ ಈ ರೀತಿ ಆಗಿರು ವುದು ಪ್ರಪ್ರಥಮ. ಇದು ನಾಚಿಕೆ ಗೇಡಿನ ಸಂಗತಿ ಯಾಗಿದೆ ಎಂದು ಟೀಕಿಸಿದರೆ ಆಡಳಿತ ಪಕ್ಷದ ಸದಸ್ಯರು ಹೊರದಬ್ಬಿದ ಪ್ರಸಂಗವನ್ನು ಸಮರ್ಥಿಸಿಕೊಂಡರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರ ಅಧ್ಯಕ್ಷತೆಯಲ್ಲಿ ನಡೆ ಯುತ್ತಿದ್ದ ಸಭೆಯಲ್ಲಿ ಕಡಿಯಾಳಿ ವಾರ್ಡಿನ ರಸ್ತೆ ಉದ್ಘಾಟನೆ ಸಂಬಂಧಿಸಿ ಚರ್ಚೆ ನಡೆಯಿತು.  ವಾರ್ಡ್‌ ಸದಸ್ಯೆ ಗೀತಾ ಶೇಟ್‌ ಅವರು ನಗರಸಭೆ ಗಮನಕ್ಕೆ ತರದೇ ಡಿಮೆಲ್ಲೋ ರಸ್ತೆ ಯನ್ನು ಉದ್ಘಾಟಿಸಿದ್ದಾರೆ ಎನ್ನುವ ಆರೋಪದ ವಿಚಾರಕ್ಕೆ ಸಂಬಂಧಿಸಿ ದಂತೆ ಅವರ ಹಾಗೂ ನಾಮ ನಿರ್ದೇಶಿತ ಸದಸ್ಯ ಸತೀಶ್‌ ಪುತ್ರನ್‌ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಅದು ರಸ್ತೆ ಉದ್ಘಾಟನೆ ಕಾರ್ಯ ಕ್ರಮವಲ್ಲ, ಚರ್ಚಿನ ಫಾದರ್‌ ಅವ ರಿಗೆ ಬೀಳ್ಕೊಡುಗೆ ಸಂಬಂಧ ಟೇಪ್‌ ಕತ್ತರಿಸಿದ ಚಿತ್ರವನ್ನು ನೀವು ನೋಡಿ ರುವುದು ಎಂದು ಗೀತಾ ಶೇಟ್‌ ಅವರು ಹೇಳಿದರು.

ಸದಸ್ಯೆಯೇ ಕರೆದುಕೊಂಡು
ಬಂದರು…

ಕಡಿಯಾಳಿ ವಾರ್ಡಿನ ರಸ್ತೆ ಉದ್ಘಾ ಟನೆ ವಿಚಾರಕ್ಕೆ ಕುರಿತು ಸ್ಪಷ್ಟನೆ ನೀಡಲು ಸಭೆಯ ಮಧ್ಯೆ ನಾಗರಿಕ ರೋನಿ ಡಿಮೆಲ್ಲೋ ಅವರನ್ನು ಗೀತಾ ಶೇಟ್‌ ಕರೆದುಕೊಂಡು ಬಂದರು. ರೋನಿ ಅವರು ಸಭಾಧ್ಯಕ್ಷರ ಪೀಠ ದತ್ತ ತೆರಳುತ್ತಿದ್ದಂತೆ ಅಧ್ಯಕ್ಷರು, ಪೌರಾ ಯುಕ್ತರಾಗಲೀ ಏನೂ ಹೇಳಿಲ್ಲ, ಬದ ಲಾಗಿ ಅಲ್ಲಿದ್ದ ಆಡಳಿತ ಪಕ್ಷದ ಸದಸ್ಯರು ರೋನಿ ಮಾತನಾಡಲು ಆಕ್ಷೇಪ ವ್ಯಕ್ತ ಪಡಿಸಿದರು. ಪೌರಾಯುಕ್ತರು, ಅಧ್ಯಕ್ಷರ ಅನುಮತಿ ಪಡೆಯದೇ ಸದನಕ್ಕೆ ನಾಗರಿಕರನ್ನು ಕರೆದುಕೊಂಡು ಬಂದಿರು ವುದು ಯಾಕೆ ಎಂದು ಪ್ರಶ್ನೆ ಉದ್ಭವ ವಾಯಿತು. ಈ ವೇಳೆ ಒಬ್ಬರು ಸದಸ್ಯರು ಮೈಕ್‌ ಎಳೆದು ಕೊಂಡರು. ಇನ್ನೊಬ್ಬರು ಬಂದು ರೋನಿಯವ ರೊಂದಿಗೆ ಹೊಡೆದಾಡಿದರು. ಕುತ್ತಿಗೆ ಕಾಲರ್‌ ಪಟ್ಟಿ ಹಿಡಿದು ದೂಡಿದರು. ಮತ್ತೆ ಮೂರ್‍ನಾಲ್ಕು ಸದಸ್ಯರು ರೋನಿ ಯವರನ್ನು ದೂಡಿಕೊಂಡು ಹೋಗಿ ಹೊರದಬ್ಬಿದರು. ಈ ವೇಳೆ ಮಾತಿನ ಚಕಮಕಿಯೂ ನಡೆದಿತ್ತು. ಆರ್‌.ಕೆ. ರಮೇಶ್‌ ಪೂಜಾರಿ, ರಮೇಶ್‌ ಕಾಂಚನ್‌, ಸತೀಶ್‌ ಪುತ್ರನ್‌, ಸುಕೇಶ್‌ ಕುಂದರ್‌ ಮತ್ತಿತರರು ರೋನಿ ಸುತ್ತ ಸುತ್ತುವರಿದು ಹೊರದಬ್ಬಿದರು. ತನ್ನ ಮೇಲೆ ಹಲ್ಲೆಯಾಯಿತು ಎಂದು ರೋನಿ ಮಾಧ್ಯಮಗಳ ಜತೆ ದೂರಿಕೊಂಡರು. ಆ ಬಳಿಕ ಸಾಮಾನ್ಯ ಸಭೆಯನ್ನು ಅಲ್ಲಿಗೆ ಮೊಟಕುಗೊಳಿಸಲಾಯಿತು. ಹಲ್ಲೆಗೊಳಗಾದ ರೋನಿ  ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಸದಸ್ಯೆಯ ರಾಜೀನಾಮೆ
ಆಡಳಿತ ಪಕ್ಷದ ಸದಸ್ಯೆಯಾಗಿಯೂ ಅಧಿಕಾರಿಗಳು, ಆಡಳಿತ ಪಕ್ಷದ ಸದಸ್ಯರು ಯಾವುದೇ ಬೆಂಬಲ ನೀಡು  ತ್ತಿಲ್ಲ. ಅಭಿವೃದ್ಧಿ ಕಾರ್ಯ ಮಾಡು ವಾಗಲೂ ನಾಮ ನಿರ್ದೇಶಿತ ಸದಸ್ಯರ ಹಸ್ತಕ್ಷೇಪ ದಿಂದ ತೊಂದರೆ ಯಾಗು ತ್ತಿದೆ. ಇದರಿಂದ ಬೇಸತ್ತು  ನಗರ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡು ತ್ತಿರುವುದಾಗಿ ಗೀತಾ ಶೇಟ್‌ ರಾಜೀ ನಾಮೆ ಪತ್ರವನ್ನು ಅಧ್ಯಕ್ಷರಿಗೆ ನೀಡಿ ದರು. ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೋಸ್ಕರ ಇನ್ನೂ ಸಹ ಪಕ್ಷದಲ್ಲಿ ಇರು ತ್ತೇನೆ ಎಂದವರು ಇದೇ ವೇಳೆ ತಿಳಿಸಿದರು. ನಗರಸಭೆಯಲ್ಲಿ ನಡೆದ ಪ್ರಕರಣದ ಕುರಿತು ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Advertisement

ವಿಪಕ್ಷ  ಸದಸ್ಯರ ಷಡ್ಯಂತ್ರ
ನಗರಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು. ಇದು ನಡೆಯಬಾರದಿತ್ತು. ಆದರೆ ಒಪ್ಪಿಗೆಯಿಲ್ಲದೆ ಏಕಾಏಕಿ ಸದನಕ್ಕೆ ನಾಗರಿಕರು ಪ್ರವೇಶಿಸಿದ್ದು ತಪ್ಪು. ಇದರ ಹಿಂದೆ ವಿಪಕ್ಷ ಸದಸ್ಯರ ಷಡ್ಯಂತ್ರ ಇರುವ ಅನುಮಾನವಿದೆ. ಈ ಘಟನೆಯ ಲಾಭ ಪಡೆಯಲು ವಿಪಕ್ಷ ಪ್ರಯತ್ನಿಸುತ್ತಿದೆ. ಆತ್ಮರಕ್ಷಣೆಗೋಸ್ಕರ, ಸದಸ್ಯರು ಅವರನ್ನು ತಡೆದು ಹೊರಹಾಕಿದ್ದಾರೆ. ತಡೆಯದಿದ್ದರೆ ಏನಾದರೂ ಅನಾಹುತ ನಡೆದರೆ ಯಾರು ಹೊಣೆ? ರಾಜೀನಾಮೆ ವಿಚಾರ, ಹಲ್ಲೆ ವಿಚಾರವನ್ನು ಪರಿಶೀಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ.

– ಮೀನಾಕ್ಷಿ  ಮಾಧವ ಬನ್ನಂಜೆ, ನಗರಸಭಾಧ್ಯಕ್ಷೆ

ಗೂಂಡಾಗಿರಿ ತಲೆ ತಗ್ಗಿಸುವಂತಹದ್ದು
ನಗರಸಭಾ ಸದಸ್ಯರು, ನಾಗರಿಕರೆಲ್ಲ ತಲೆತಗ್ಗಿಸಬೇಕಾದ ಸಂಗತಿ. ವಿಪಕ್ಷ ಸದಸ್ಯರು ಸಾರ್ವಜನಿಕರ ಕ್ಷಮೆ ಯಾಚಿಸುತ್ತಿದ್ದೇವೆ. ನಾಗರಿಕರು ನಿಯಮಬದ್ಧವಾಗಿ ಬರಬಹುದು. ಅನುಮತಿಯಿಲ್ಲದೆ ಬಂದರೂ ಅಧ್ಯಕ್ಷರು ಅಥವಾ ಪೌರಾಯುಕ್ತರು ತಿಳಿಹೇಳಬಹುದಿತ್ತು. ಆದರೆ ಹಲ್ಲೆ ಮಾಡಿ, ಹೊರಹಾಕಿದ್ದು ಎಷ್ಟು ಸರಿ? ಇದು ಖಂಡನೀಯ. ಈ ರೀತಿಯ ಶೋಷಣೆ, ದಬ್ಟಾಳಿಕೆ, ಗೂಂಡಾಗಿರಿ ಪ್ರವೃತ್ತಿ ಉಡುಪಿ ನಗರಸಭೆಯಿಂದಲೇ ನಡೆಯುತ್ತಿರುವುದು ನಾಚಿಕೆಗೇಡು. ಜನಾಭಿಪ್ರಾಯ ಮೂಡಿಸಿ ನ್ಯಾಯ ಕೇಳುತ್ತೇವೆ. ಈ ಘಟನೆಗೆ ಆಡಳಿತ ಪಕ್ಷವೇ ನೇರ ಹೊಣೆ
.
– ದಿನಕರ್‌ ಶೆಟ್ಟಿ  ಹೆರ್ಗ, ಮಾಜಿ ಅಧ್ಯಕ್ಷ /ವಿಪಕ್ಷ ಸದಸ್ಯ.

ನಾನು ಯಾವ ಪಕ್ಷದವನೂ ಅಲ್ಲ
ನಗರಸಭೆ ವ್ಯಾಪ್ತಿಯ ವಿಷಯವೊಂದರ ಕುರಿತು ಸ್ಪಷ್ಟನೆ ನೀಡುವ ಕುರಿತು ನನಗೆ ನಗರಸಭೆ ಸದಸ್ಯೆ ಗೀತಾ ಅವರು ಕರೆ ಮಾಡಿ ಬರಲು ಹೇಳಿದ್ದಕ್ಕೆ ನಾನು ಬಂದಿದ್ದೆ. ಆದರೆ ಸದನದ ನಿಯಮಗಳ ಬಗ್ಗೆ ಗೊತ್ತಿರಲಿಲ್ಲ. ಮಾತನಾಡಲು ಆರಂಭಿಸಿದಾಗ ಸದಸ್ಯರು ಕೆನ್ನೆಗೆ ಹೊಡೆದು, ಹಲ್ಲೆಗೈದು, ಎದೆಗೆ ಒದ್ದು ಹೊರಹಾಕಿದ್ದಾರೆ. ಸದನದ ಹೊರೆಗೆ ಸಹ ಹಲ್ಲೆ ಮಾಡಿದ್ದಾರೆ. ಬೆರಳಿಗೂ ಗಾಯವಾಗಿದೆ. ನಾನು ಯಾವ ಪಕ್ಷದಲ್ಲಿಯೂ ಇಲ್ಲ. 
– ರೋನಿ ಡಿ’ಮೆಲ್ಲೋ, ಹಲ್ಲೆಗೊಳಗಾದ ವ್ಯಕ್ತಿ.

ನನ್ನ ಗಮನಕ್ಕೆ ಬಂದಿಲ್ಲ : ಸಚಿವ ಪ್ರಮೋದ್‌
ಮಲ್ಪೆ:
ನಗರಸಭೆಯಲ್ಲಿ ಗುರುವಾರ ನಡೆದಿರುವ ಯಾವುದೇ ವಿದ್ಯಮಾನ ನನ್ನ ಗಮನಕ್ಕೆ ಬಂದಿಲ್ಲ. ಇಂದು ದಿನವಿಡೀ ಕಾರ್ಯಕ್ರಮದ ಒತ್ತಡವಿತ್ತು. ನಗರಸಭೆಯಲ್ಲಿ ಅಂತಹ ಯಾವುದೇ ಘಟನೆಯ ನಡೆದಿದ್ದರೆ ಆ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿ ತಪ್ಪು ಯಾರದೇ ಇದ್ದಲ್ಲಿ ಆದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಪ್ರಮೋದ್‌ ಹೇಳಿದ್ದಾರೆ. ಗುರುವಾರ ಕುತ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆಯ ಸಾಮನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next