Advertisement
ನಗರದಲ್ಲಿ ಔಷಧ ಮಳಿಗೆಗಳು, ಪೆಟ್ರೋಲ್ ಬಂಕ್ ಮತ್ತು ಬೆಳಗ್ಗೆ ನಿಗದಿತ ಅವ ಧಿವರೆಗೆ ಹಣ್ಣಿನ ಮಳಿಗೆಗಳು, ತರಕಾರಿ ಮಾರುಕಟ್ಟೆ ಗಳನ್ನು ಹೊರತುಪಡಿಸಿ, ಸಿಟಿ, ಸರ್ವೀಸ್, ಕೆಎಸ್ಸಾರ್ಟಿಸಿ ಸಾರಿಗೆ ಬಸ್‌ಗಳು, ಚಿತ್ರಮಂದಿರ, ಹೋಟೆಲ್, ಫುಟ್ ವೇರ್, ಬಟ್ಟೆ, ಕಿರಾಣಿ ಅಂಗಡಿ, ಗಾರ್ಮೆಂಟ್ಸ್ ಸೇರಿ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಬಂದ್ ಮಾಡುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಿದ್ದಾರೆ.
ವಾರಾಂತ್ಯ ಲಾಕ್‌ಡೌನ್ ನಿಮಿತ್ತ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದ ಪ್ರಮುಖ ಕ್ಲಾಕ್ ಟವರ್, ಮಣಿಪಾಲ ಸಿಂಡಿಕೇಟ್ ಸರ್ಕಲ್, ಸೇರಿದಂತೆ ಬಹುತೇಕ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ಕರ್ಫ್ಯೂನಲ್ಲಿಯೂ ಅನೇಕರು ಅನಗತ್ಯ ಓಡಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಯೊಬ್ಬರನ್ನು ತಡೆದು ವಿಚಾರಿಸಿದರು. ಸಕಾರಣ ನೀಡಿದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಇಲ್ಲವಾದಲ್ಲಿ ಹಿಂದಕ್ಕೆ ಕಳುಹಿಸಲಾಗುತ್ತಿತ್ತು.
Related Articles
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎ.24 ಹಾಗೂ ಎ.25ರಂದು ಒಟ್ಟು 644 ಮದುವೆ ಸಮಾರಂಭ ನಡೆದಿದೆ. ಕಾರ್ಕಳದಲ್ಲಿ 58, ಹೆಬ್ರಿಯಲ್ಲಿ 16, ಕುಂದಾಪುರದಲ್ಲಿ 243, ಬೈಂದೂರಿನಲ್ಲಿ 79, ಉಡುಪಿ 122, ಕಾಪು 47, ಬ್ರಹ್ಮಾವರದಲ್ಲಿ ಒಟ್ಟು 79 ಮದುವೆ ಕಾರ್ಯಕ್ರಮಗಳು ನಡೆದಿವೆ. ಇವೆಲ್ಲವೂ ಆಯಾ ತಾಲೂಕಿನ ತಹಶೀಲ್ದಾರ್ ಅವರ ಅನುಮತಿ ಪಡೆದುಕೊಂಡಿವೆ.
Advertisement
ಆಟೋ ಸಂಚಾರನಗರದಲ್ಲಿ ಜನಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ನರ್ಮ್ ಬಸ್ ಸಂಚಾರ ಇರಲಿಲ್ಲ. ನಗರದ ವಿವಿಧ ಕಡೆಯಲ್ಲಿ ಆಟೋ ಸಂಚಾರವಿತ್ತು.