Advertisement

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

03:10 PM Oct 02, 2024 | Team Udayavani |

ಉಡುಪಿ: ಉಡುಪಿ-ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಈ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ ಒಟ್ಟು 25 ಕಳ್ಳತನ ಪ್ರಕರಣಗಳು ನಡೆದಿವೆ. ಅಂಗಡಿಗೆ ನುಗ್ಗಿ ಕಳ್ಳತನ, ಮನೆಕಳವು, ಅಪಾರ್ಟ್‌ಮೆಂಟ್‌ಗೆ ನುಗ್ಗಿ ಕಳವು, ಚಿನ್ನ ಕಸಿದು ಪರಾರಿ ಹೀಗೆ ಭಿನ್ನ ಭಿನ್ನ ಮಾದರಿಯ ಲೂಟಿ ನಡೆದಿದೆ. ಇವುಗಳಲ್ಲಿ ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿದ್ದು ಕೇವಲ 3-4 ಪ್ರಕರಣ ಮಾತ್ರ.

Advertisement

ರವಿವಾರ ತಡರಾತ್ರಿ ಉಡುಪಿ ನಗರ ಠಾಣೆಯ ಸಮೀಪವೇ ನಡೆದ ಕಳ್ಳತನ ಪ್ರಕರಣ ನಿಜಕ್ಕೂ ಜನರನ್ನು ಬೆಚ್ಚಿಬೀಳಿಸಿದೆ. ಈ ಹಿಂದೆ ಬ್ರಹ್ಮಗಿರಿಯ ಅಪಾರ್ಟ್ ಮೆಂಟ್‌ಗೆ ನಾಲ್ಕೈದು ಮಂದಿ ಮುಸುಕುಧಾರಿಗಳು ಕಳವು ಮಾಡಲು ಬಂದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ, ಅವರು ಮುಂದೆಲ್ಲಿ ಹೋದರು ಎಂಬ ಸುಳಿವಿಲ್ಲ. ಈಗ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಎಂದರೆ ಒಂಟಿ ಮನೆಗಳು ಬಿಡಿ ಅಪಾರ್ಟ್‌ಮೆಂಟ್‌ಗಳೂ ಸೇಫ‌ಲ್ಲ ಎಂಬಂತಾಗಿದೆ.

ಅಂಗಡಿ, ದೈವಸ್ಥಾನವನ್ನೂ ಬಿಡದ ಕಳ್ಳರು!
ಆ.7: ಕರಾವಳಿ ಬೈಪಾಸ್‌ ಬಳಿಯ ಈಜಿ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯಿಂದ 6 ಲ.ರೂ.ಮೌಲ್ಯದ ವಸ್ತು ಕಳವು.
*ಆ.10: ಅಂಬಲಪಾಡಿ ಬೈಪಾಸ್‌ ಬಳಿಯ ಹಾಲಿನ ಅಂಗಡಿ ಶಟರ್‌ ಬೀಗ ಮುರಿದು 35 ಸಾವಿರ ರೂ. ಲೂಟಿ.
*76 ಬಡಗಬೆಟ್ಟು ಗ್ರಾಮದ ಬೈಲೂರಿನ ಧೂಮವತಿ ದೈವಸ್ಥಾನದ ಗರ್ಭಗುಡಿಯ ಒಳಗಿನ ಡಬ್ಬಿಯಿಂದ 50,000ರೂ. ಕಳವು (ಆರೋಪಿ ಸೆರೆ)
*ಮೇ 29ರಂದು ಅಂಬಾಗಿಲಿನ ಚಾಲುಕ್ಯ ಬಾರ್‌ಗೆ ನುಗ್ಗಿದ ಕಳ್ಳರು ಕ್ಯಾಶ್‌ ಕೌಂಟರ್‌ನಲ್ಲಿದ್ದ 1.20 ಲ.ರೂ. ಕಳವು.

ಇದನ್ನೂ ಓದಿ:ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಪ್ರವಾಸಕ್ಕೆ ಹೋಗಿದ್ದ ವೇಳೆ ಕಳವು!
*ಮೇ 9: ಬೈಲೂರಿನ ಪ್ರಭಾವತಿ ಅವರು ಪ್ರವಾಸ ಹೋಗಿದ್ದಾಗ ಕಳ್ಳರು ನುಗ್ಗಿ 1,74,200 ರೂ.ಮೌಲ್ಯದ ಚಿನ್ನ ಹಾಗೂ 3,000 ರೂ. ಕಳವು.
*ಮಣಿಪಾಲದ ಅಪಾರ್ಟ್‌ಮೆಂಟ್‌ನಲ್ಲಿದ್ದ ಅನ್ಯ ರಾಜ್ಯದ ವಿದ್ಯಾರ್ಥಿಗಳ ಲಕ್ಷಾಂತರ ರೂ.ಮೌಲ್ಯದ ಲ್ಯಾಪ್‌ ಟಾಪ್‌ ಕಳವಾಗಿತ್ತು. ಬಂಧನ ಆಗಿದೆ.
*ಆ.5: ಹಯಗ್ರಿವನಗರದಲ್ಲಿ ರಸ್ತೆಬದಿಯಲ್ಲಿ ಸಾಗುತ್ತಿದ್ದ ಶಾಂತಾ ಕಾಮತ್‌(84) ಅವರ 20 ಗ್ರಾಂ ಮೌಲ್ಯದ ಚೈನ್‌ ಕಸಿಯಲಾಗಿತ್ತು. ಬ್ಯಾಂಕ್‌ಗಳಲ್ಲಿಯೂ ಕಳವು ಯತ್ನ!
*ಜೂ.26: ಸಂತೆಕಟ್ಟೆಯಲ್ಲಿ ಕಳ್ಳರು ಎಟಿಎಂ ಕಳವಿಗೆ ಯತ್ನ. ಜೂನ್‌ನಲ್ಲಿ ಬ್ಯಾಂಕ್‌ವೊಂದಕ್ಕೆ ನುಗ್ಗಿ ಬರೆದಿಟ್ಟಿದ್ದ ಚೆಕ್‌ ಕಳವು.
*ಫೆ-24ರಿಂದ 26ರ ನಡುವೆ 80 ಬಡಗುಬೆಟ್ಟು ಗ್ರಾಮದ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ‌ಲ್ಲಿ ಕಳ್ಳತನಕ್ಕೆ ಯತ್ನ.
*ಫೆ.23ರಿಂದ 26ರ ನಡುವೆ ಮೂಡನಿಡಂಬೂರಿನ ನ್ಯಾಷನಲ್‌ ಇನ್ಶೂರೆನ್ಸ್‌ ಕೋ. ಲಿಮಿಟೆಡ್‌ ಕಚೇರಿಯಲ್ಲಿ ಕಳವು ಯತ್ನ

Advertisement

ಪೊಲೀಸರೇನು ಮಾಡಬಹುದು?
1.ಹಿಂದಿನಂತೆ ಬೀಟ್‌ ಪದ್ಧತಿ ಸಕ್ರಿಯ, ಆಯಕಟ್ಟಿನ ಭಾಗಗಳಲ್ಲಿ ಸಿಸಿಟಿವಿ
2.ಕಳ್ಳತನ ನಡೆದ ದಿನ ಮಾತ್ರ ಅಲರ್ಟ್‌ ಆಗಿ ಉಳಿಯದೆ ಎಲ್ಲ ದಿನವೂ ಸಕ್ರಿಯ
3.ಪೊಲೀಸ್‌ ಸಿಬ್ಬಂದಿ, ಹೊಯ್ಸಳ ಗಸ್ತು ವಾಹನ ಸಂಖ್ಯೆ ಹೆಚ್ಚಳ ಮತ್ತು ಮಾಹಿತಿದಾರರ ಹೆಚ್ಚಳ, ಅನ್ಯರಾಜ್ಯದವರ ಮಾಹಿತಿ ನಮೂದು

ಖಾಲಿ ಮನೆಗಳೇ ಟಾರ್ಗೆಟ್‌
*ಜು.12ರಂದು ಕಕ್ಕುಂಜೆಯಲ್ಲಿ ಅದಯ್ಯ ಹಿರೇಮಠ ಮನೆಯ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಕಪಾಟಿನಲ್ಲಿದ್ದ 16 ಗ್ರಾಂ ತೂಕದ ಚಿನ್ನ ಕಳವು.
*ಮೇ 19: ಬುಡ್ನಾರು ನಿವಾಸಿ ಯುವರಾಜ್‌ ಮನೆಗೆ ನುಗ್ಗಿ ಎರಡು ಕಾಣಿಕೆ ಡಬ್ಬಿಯಲ್ಲಿದ್ದ 23,000ರೂ. ಮತ್ತು 5 ಗ್ರಾಂ ತೂಕದ ಚಿನ್ನ ಕಳವು.
*ಮಾ.10: 76 ಬಡಗಬೆಟ್ಟುವಿನ ಮನೆಯಿಂದ ನೆಕ್ಲೆಸ್‌, ವಜ್ರದ ಬಳೆ-ಬೆಂಡೋಲೆ ನಗದು ಸಹಿತ ಒಟ್ಟು 18.8 ಲಕ್ಷ ರೂ. ಮೌಲ್ಯದ ವಸ್ತು ಕಳವು.
*ಆ.26ರಂದು ಉಡುಪಿಯ ಪುತ್ತೂರಿನಲ್ಲಿ ಟೈಲರಿಂಗ್‌ ಮಾಡಿಕೊಂಡಿರುವ ಅಂಬಿಕಾ ಅವರ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಚೈನ್‌, ಕಿವಿಯೋಲೆ ಕಳವು ಮಾಡಿದ್ದರು.
*ಆ.18: ಕಾಡಬೆಟ್ಟುವಿನ ಮನೆಗೆ ನುಗ್ಗಿ 7 ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆ ಕಳವು (ಆರೋಪಿಗಳ ಬಂಧನ)
*ಆ.4: ಬುಡ್ನಾರಿನ ಮನೆಗೆ ನುಗ್ಗಿದ 10- 15 ಸಾವಿರ ರೂ. ನಗದು ಕಳವು

ವಿವಿಧ ಆಯಾಮದಲ್ಲಿ ತನಿಖೆ ಕಳ್ಳರ ಪತ್ತೆಗೆ ಪೊಲೀಸರು ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

*ಡಾ| ಕೆ.ಅರುಣ್‌, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next