Advertisement
ಮೈಸೂರಿನ ಅಬ್ರಾರ್ ಅಹಮದ್ ಶರೀಫ್ (28) ನೀರಿನಲ್ಲಿ ಮುಳುಗಿದ್ದು, ಜೀವರಕ್ಷಕ ತಂಡ ರಕ್ಷಿಸಿ ಮೇಲೆ ತಂದರೂ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು.
ಮೈಸೂರಿನ ಉದಯಗಿರಿಯ ತೌಸೀಫ್ ಅಹಮದ್ ಎಂಬಾತ ಮಧ್ಯಾಹ್ನದ ವೇಳೆ ಅತ್ಮಹತ್ಯೆ ಮಾಡಿಕೊಳ್ಳ
ಲೆಂದು ಕಡಲಿಗೆ ಹಾರಿದ್ದು, ಮುಳು ಗೇಳುತ್ತಿದ್ದ ಅತನನ್ನು ಜೀವರಕ್ಷಕ ತಂಡದವರು ರಕ್ಷಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಸಮುದ್ರಪಾಲಾಗುತ್ತಿದ್ದ ತಮಿಳುನಾಡು ಸೇಲಂನ ಸೆಂಥಿಲ್ ಅವರನ್ನು ರಕ್ಷಿಸಲಾಗಿದೆ. ಕುಟುಂಬ ಸಮೇತರಾಗಿ ಬಂದಿದ್ದ ವಿಜಯಪುರದ ಬಸವರಾಜ್ ಅವರನ್ನು ಜೀವರಕ್ಷಕ ತಂಡದವರು ಪಾರು ಮಾಡಿದ್ದಾರೆ. ಮತ್ತೊಂದು ಘಟನೆಯಲ್ಲಿ ನವಾಜ್ ಎಂಬವರನ್ನು ರಕ್ಷಿಸಲಾಗಿದೆ. ಅವರು ಮದ್ಯಸೇವಿಸಿ ನೀರಿಗೆ ಇಳಿದಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಜೀವರಕ್ಷಕರು ಧಾವಿಸಿ ಕಾಪಾಡಿದ್ದಾರೆ. ಸ್ನೇಹಿತರೊಂದಿಗೆ ಈಜಾಡಲು ತೆರಳಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರಿನ ಸೋಹಮ್ ಘೋಷ್ ಅವರನ್ನೂ ರಕ್ಷಿಸಲಾಗಿದೆ.