Advertisement
ಮನುಷ್ಯ ಯಾರಿಗೋಸ್ಕರವಾದರೂ ಬದುಕುತ್ತಾನೆ? ಅರ್ಜುನ ಯಾರಿಗೋಸ್ಕರ ಬದುಕಿದ್ದಾನೋ ಅವರೇ ಎದುರು ನಿಂತಿದ್ದಾರೆ. ಒಂದು ವೇಳೆ ಕೌರವರೇ ಸತ್ತು ಹೋದರೆ ಲೋಕ ಶೂನ್ಯವಾಗಿ ಕಾಣುತ್ತದೆ. ಸ್ನೇಹಿತರು, ಪಕ್ಕದ ಮನೆಯವರು, ಬಂಧುಗಳು ಹೀಗೆ ಯಾವುದಾದರೂ ಒಂದು ಬೆಂಚ್‌ಮಾರ್ಕ್‌ನಡಿ ತುಲನೆ ಮಾಡುತ್ತೇವೆ. ಇವರಿಗಿಂತ ಹೊರಗಿನ ಲೋಕದವರು ಇವರಿಗೆ ಬೇಡವೇ ಬೇಡ. ಸ್ಪರ್ಧೆ ನಡೆಸುವುದು ಸಮಾನಮನಸ್ಕರ ಜತೆ. ಕೈಕೇಯಿ ಅಷ್ಟೆಲ್ಲ ಹಠ ಹಿಡಿದದ್ದು ಕೌಸಲೆÂ ಜತೆಗಿನ ಸ್ಪರ್ಧೆಗಾಗಿ. ಅರ್ಜುನನಲ್ಲಿ ಭಾವನೆ ಮತ್ತು ವಿಚಾರಗಳು ಮಿಶ್ರವಾಗಿದೆ. ಒಂದಕ್ಕೊಂದು ಅಡ್ಡ ಬರುತ್ತದೆ. ನಿಶ್ಚಯ ಮಾಡುವುದು ಕಷ್ಟವಾಗುತ್ತದೆ. ನಾನು ನಿನ್ನಲ್ಲಿ ದೈನ್ಯದಿಂದ ಕೇಳುತ್ತಿದ್ದೇನೆ. ಯಾವುದು ಧರ್ಮ? ಯಾವುದು ಅಧರ್ಮ ಎನ್ನುವುದನ್ನು ಶಿಷ್ಯನಾಗಿ ನನಗೆ ಹೇಳು ಎನ್ನುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811