Advertisement

Udupi: ಗೀತಾ ಸಾರ ಜೀವನದಲ್ಲಿ ಅಳಡಿಸಿಕೊಂಡಾಗ ಜೀವನ ಸಾರ್ಥಕ: ಪುತ್ತಿಗೆ ಶ್ರೀ 

12:23 AM Aug 25, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಗದ್ಗೀತೆಯ ಪುಸ್ತಕ ಗಳನ್ನು ಪಲ್ಲಕ್ಕಿಯಲ್ಲಿಟ್ಟು ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಶನಿವಾರ ಮೆರವಣಿಗೆ ಮಾಡುವ ಮೂಲಕ “ಗೀತೋತ್ಸವ’ ವಿಶೇಷ ರೀತಿಯಲ್ಲಿ ನಡೆಯಿತು.

Advertisement

ಮೆರವಣಿಗೆಯು ರಾಜಾಂಗಣಕ್ಕೆ ಸಾಗಿಬಂತು. ಶ್ರೀಪಾದರುಸಭಾ ಕಾರ್ಯಕ್ರಮದ ಪೂರ್ವದಲ್ಲಿ ಭಗವದ್ಗೀತೆ ಯ ವಿಶೇಷ ಚಿಂತನೆಯ ಪ್ರತಿಕೃತಿಯನ್ನು ಅನಾವರಣಗೊಳಿಸಿದರು. ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು “ಗೀತಾ ಧ್ಯಾಯ ಭಾವ ಪರಿಚಯ’ ಕೃತಿಯ 4ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿ, ಶ್ರೀ ಕೃಷ್ಣನಿಗೆ ಭಗವದ್ಗೀತೆ ಇಷ್ಟ. ನಮಗೆ ಇಷ್ಟವಾದ ಉಂಡೆ, ಲಾಡು, ಚಕ್ಕುಲಿ ಇತ್ಯಾದಿಗಳನ್ನು ದೇವರಿಗೆ ಇಷ್ಟ ಎನ್ನುವ ನೆಲೆಯಲ್ಲಿ ನೈವೇದ್ಯ ಮಾಡುತ್ತೇವೆ. ವಾಸ್ತವದಲ್ಲಿ ದೇವರಿಗೆ ಭಗವದ್ಗೀತೆಯೇ ಇಷ್ಟ. ಗೀತೆಯ ಸಾರವನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಂಡಾಗ ಸಾರ್ಥಕ ಬದುಕು ಸಾಧ್ಯ. ಗೀತೆಯ ಮೂಲಕ ಭಗವಂತ ನಮಗೆ ಮೋಕ್ಷದ ಮಾರ್ಗ ತೋರುತ್ತಾನೆ. ಅಂತರ್ಯಾಮಿಯಾಗಿರುವ ಭಗವಂತನ ಮಾರ್ಗದರ್ಶನದಲ್ಲಿ ನಾವು ಸಾಗಿದರೆ ಎಲ್ಲವೂ ಸಾಕಾರವಾಗಲಿದೆ. ಭಗದ್ಗೀತೆ ಓದದವರು ಭೂಮಿಗೆ ಭಾರ ಎಂದರು.

ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಗೀತೆಯನ್ನು ಚೆನ್ನಾಗಿ ಅರ್ಥ ತಿಳಿದು ಭಾವಪೂರ್ಣವಾಗಿ ಪಠನ ಮಾಡಬೇಕು. ಸರ್ವಶಾಸ್ತ್ರದ ಸಾರ ಮಹಾಭಾರತದಲ್ಲಿದ್ದು, ಮಹಾಭಾರ ತದ ಸಾರ ಭಗವದ್ಗೀತೆಯಲ್ಲಿದೆ. ಪುತ್ತಿಗೆ ಶ್ರೀಪಾದರು ಜಗತ್ತಿಗೆ ಭಗವದ್ಗಿತೇಯ ಸಾರ ಪ್ರಸಾರ ಮಾಡುತ್ತಿದ್ದಾರೆ. ಭಗದ್ಗೀತೆ ಹಾಲು, ಭಾಗವತ ಹಣ್ಣು ಇದ್ದಂತೆ. ಈ ಎರಡರ ಭಕ್ತಿಪೂರ್ಣ ಅಧ್ಯಯನದಿಂದ ಆತ್ಮ ದಷ್ಟಪುಷ್ಟವಾಗುತ್ತದೆ ಎಂದರು.

ಚಕ್ರವರ್ತಿ ಉಪನ್ಯಾಸ:
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು “ದ್ವೇಷಾ ಸೂಯೆಹಿಂಸೆಗಳನ್ನು ಗೀತಾ ಚಾರ್ಯ ಬೋಧಿಸಿದನೇ?’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ, ಶ್ರೀ ಕೃಷ್ಣನ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಯುತ್ತಲೇ ಇದೆ. ಕೃಷ್ಣನ ಕುರಿತು ತಪ್ಪು ಕಲ್ಪನೆಯನ್ನು ನಮ್ಮಲ್ಲಿ ತುಂಬಲಾಗಿದೆ ಎಂದರು.

Advertisement

ಕೃಷ್ಣನ ಹೆಸರು ಹಾಳು ಮಾಡಲು ಎಷ್ಟು ಕೆಸರೆರೆಚಿದರೂ ಅಷ್ಟೇ ವೈಭವ ವಾಗಿ ಕಾಣಿಸುತ್ತಲೇ ಹೋದ. ಎಂದೂ ಶ್ರೀಕೃಷ್ಣನ ಮೇಲೆ ಕೆಸರು ಬಿದ್ದಿಲ್ಲ, ಕೆಸರೆ ರೆಚಿದವರ ಮೇಲೆ ಕೆಸರು ಬಿದ್ದಿದೆ. ಮನುಷ್ಯ ಭಗವಂತನಿಗೆ ಕೊಟ್ಟಷ್ಟು ಕಷ್ಟ ಬೇರೆ ಯಾರಿಗೂ ನೀಡಿಲ್ಲ. ಭಗವ ದ್ಗೀತೆಯನ್ನು ತುಂಬಿಕೊಂಡಷ್ಟೂ ಹಿಂದು ಗಳು ಸಶಕ್ತರಾಗುತ್ತಾರೆ ಮತ್ತು ಶ್ರೀ ಕೃಷ್ಣ ನಮ್ಮನ್ನು ಬಲಗೊಳಿಸುತ್ತಾನೆ ಎಂದರು.

ಕೊಯಮತ್ತೂರಿನ ಪಿ.ಆರ್‌.ವಿಟ್ಠಲ್‌, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್‌, ದಾನಿ ಗಳಾದ ವಿಶ್ವನಾಥ ಶೆಣೈ, ಪ್ರಭಾ ಶೆಣೈ ದಂಪತಿ, ನಿವೃತ್ತ ಶಿಕ್ಷಕಿ ನಂದಿನಿ ಶೆಣೈ ಅವರಿಗೆ ಕೃಷ್ಣಾನಂದ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಮಥುರಾ ದೇವಸ್ಥಾನದ ಪ್ರಧಾನ ಅರ್ಚಕರಾದ ದಯಾಳ್‌, ರುದ್ರಪಟ್ಟಂ ಸಹೋದರರು, ಮಟ್ಟೂರು ಸಹೋದರರು ಉಪಸ್ಥಿತರಿ ದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಶ್ರೀಪಾದರು ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next