Advertisement

ಉಡುಪಿ: ಸಂಭ್ರಮದ ಲಕ್ಷದೀಪೋತ್ಸವ ಆರಂಭ

08:18 AM Nov 02, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ಉತ್ಥಾನ ದ್ವಾದಶಿಯಂದು ಸಂಭ್ರಮದ ಲಕ್ಷದೀಪೋತ್ಸವ ಆರಂಭಗೊಂಡಿತು.

Advertisement

ಮಂಗಳವಾರ ಏಕಾದಶಿಯಾದ ಕಾರಣ ಬುಧ ವಾರ ಬೆಳಗ್ಗೆ ಬೇಗ ಪೂಜೆಗಳು ನಡೆದವು. ಅಪರಾಹ್ನ ರಥಬೀದಿಯಲ್ಲಿ ನಿರ್ಮಿಸಿದ ಅಟ್ಟಣಿಗೆಗಳಲ್ಲಿ ಹಣತೆಗಳಿಗೆ ಮುಹೂರ್ತವನ್ನು (ಗೋಮಯದ ಮೇಲೆ ಹಣತೆಗಳನ್ನು ಇಡುವುದು) ಪರ್ಯಾಯ ಶ್ರೀ ಪೇಜಾವರ ಉಭಯ ಶ್ರೀಪಾದರು, ಶ್ರೀ ಕಾಣಿಯೂರು ಶ್ರೀಪಾದರು ನಡೆಸಿದರು. ಮಧ್ವ ಸರೋವರದಲ್ಲಿ ನಡೆದ ತುಳಸೀ ಪೂಜೆ, ಕ್ಷೀರಾಬ್ಧಿ ಪೂಜೆಯಲ್ಲಿ ಪೇಜಾವರ ಉಭಯ ಶ್ರೀಪಾದರು, ಶ್ರೀ ಕೃಷ್ಣಾಪುರ, ಶ್ರೀ ಅದಮಾರು, ಶ್ರೀ ಕಾಣಿಯೂರು ಶ್ರೀಪಾದರು ಪಾಲ್ಗೊಂಡರು.


ಶ್ರೀಕೃಷ್ಣ ಮಠದಲ್ಲಿ  ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ತೆಪ್ಪೋತ್ಸವ ಜರಗಿತು.    

ರಥಬೀದಿಯ ಸುತ್ತಲೂ ಸಾವಿರಾರು ಮಣ್ಣಿನ ಹಣತೆಗಳಲ್ಲಿ ಬೆಳಕು ಕಾಣುವಾಗ ರಾತ್ರಿ ತೆಪ್ಪೋತ್ಸವ ಸಹಿತ ರಥೋತ್ಸವ ನಡೆಯಿತು. ರಥಬೀದಿ ಸುತ್ತಲೂ ಜನಜಂಗುಳಿ ಕಂಡುಬಂತು. ಚಾತುರ್ಮಾಸ್ಯದ ಆಹಾರ ಕ್ರಮ ಮುಕ್ತಾಯ ಮಳೆಗಾಲ ಚಾತುರ್ಮಾಸ್ಯದ ಅವಧಿಯ ಆಹಾರ ಕ್ರಮ ಸೋಮವಾರಕ್ಕೆ ಸಮಾಪನಗೊಂಡು, ಬುಧ  ವಾರ ದಿಂದ ಸಹಜ ಆಹಾರ ಕ್ರಮ ಆರಂಭ ಗೊಂಡಿತು. ಮಠದ ವತಿಯಿಂದ ನ. 4ರ ವರೆಗೆ 4 ದಿನ ವಾಡಿಕೆಯ ಲಕ್ಷದೀಪೋತ್ಸವ, ನ. 5 ರಂದು ಸೇವಾ ದಾರ ರಿಂದ ಲಕ್ಷದೀಪೋತ್ಸವ ನಡೆಯಲಿದೆ.

ಈಗ ಎರಡು ರಥಗಳಲ್ಲಿ ಮಾತ್ರ ಉತ್ಸವ ನಡೆಯ ಲಿದ್ದು ಬ್ರಹ್ಮರಥ ಸಪೊ¤àತ್ಸವದಲ್ಲಿ ಹೊರ ಬರ ಲಿದೆ. ಪೇಜಾವರ ಸ್ವಾಮೀಜಿಯವರ ಪರ್ಯಾಯದ ಕೊನೆಯ ಸಪೊ¤àತ್ಸವ ಜ. 9ರಂದು ಆರಂಭ ಗೊಳ್ಳ ಲಿದ್ದು ಜ. 14ರ ಮಕರಸಂಕ್ರಾಂತಿಯಂದು ಬ್ರಹ್ಮ ರಥೋತ್ಸವ ಸಹಿತ ಮೂರು ರಥಗಳ ಉತ್ಸವ ನಡೆಯಲಿದೆ.

ಉತ್ತರಾದಿ ಶ್ರೀಗಳ ಸುಧಾ ಮಂಗಲ
ಈ ಲಕ್ಷದೀಪೋತ್ಸವದ ವಿಶೇಷವೆಂದರೆ ಗುರು ವಾರ ದಿಂದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ನಡೆಸು ತ್ತಿರುವ ಶ್ರೀಮನ್ನಾ éಯಸುಧಾ ಪಾಠದ ಮಂಗಲೋ ತ್ಸವ ನಡೆಯಲಿದೆ. ಮಂಗಲೋತ್ಸವ ನ. 6 ರಂದು ನಡೆಯಲಿದ್ದು ಅಲ್ಲಿಯವರೆಗೆ ವಿವಿಧ ಮಠಾ ಧೀಶರು, ವಿದ್ವಾಂಸರ ಸಮ್ಮುಖ ವಿದ್ಯಾರ್ಥಿ ಗಳಿಗೆ ಪರೀಕ್ಷೆ ನಡೆಯಲಿದೆ. ನ. 7ರಂದು ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಗುರುಗಳಾದ ಶ್ರೀ ಸತ್ಯ ಪ್ರಮೋದತೀರ್ಥರ ಆರಾಧನೋತ್ಸವ ಜರಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗಾಗಿ ರಾಜಾಂಗಣದ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೆಳಭಾಗವನ್ನು ಬಿಟ್ಟುಕೊಡಲಾಗುತ್ತಿದೆ. ಉತ್ತರಾದಿ ಮಠದ ಸಾವಿರಾರು ಶಿಷ್ಯ ವರ್ಗದವರು ಆಗಮಿಸಲಿದ್ದಾರೆ. ಉಡುಪಿ: ಶ್ರೀಕೃಷ್ಣ ಮಠದಲ್ಲಿ  ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ತೆಪ್ಪೋತ್ಸವ ಜರಗಿತು.    

Advertisement
Advertisement

Udayavani is now on Telegram. Click here to join our channel and stay updated with the latest news.

Next