Advertisement
ಎಳನೀರು ದರ ಸಹ ಗಗನಕ್ಕೇರಿದ್ದು, ಪಂಚಮಿ ಮತ್ತು ಚೌತಿ ಮುಗಿದರೂ ಎಳನೀರು ಮತ್ತು ಬಾಳೆ ಹಣ್ಣಿನ ದರ ಇಳಿಕೆಯಾಗಿಲ್ಲ. ಸ್ಥಳೀಯವಾಗಿ ಬಾರಕೂರು, ಕುಂದಾಪುರದಿಂದ ಎಳನೀರು ಪೂರೈಕೆಯಾಗುತ್ತಿತ್ತು. ಕಾರ್ಮಿಕರ ಕೊರತೆ, ತೆಂಗು ಬೆಳೆಗೆ ಇಲ್ಲದ ಹೆಚ್ಚಿನ ಒಲವು, ಕೊಬ್ಬರಿ ಎಣ್ಣೆಗೆ ಆದ್ಯತೆ ನೆಲೆಯಲ್ಲಿ ಸ್ಥಳೀಯವಾಗಿ ಎಳನೀರು ಪೂರೈಕೆ ಮಾರುಕಟ್ಟೆಗೆ ಕಡಿಮೆಯಾಗುತ್ತಿದೆ.
- ಮಳೆ ಬಿಡುವು ನೀಡಿದರೆ ವಿಪರೀತ ಸೆಕೆ; ಎಳನೀರಿಗೆ ಹೆಚ್ಚಿನ ಬೇಡಿಕೆ
ಹಬ್ಬಗಳು ಮುಗಿದರೂ ಬಾಳೆ ಹಣ್ಣಿನ ದರ ಮಾತ್ರ ಕಡಿಮೆಯಾಗಿಲ್ಲ. ಮೈಸೂರು, ಪುಟ್ಬಾಳೆ, ಪಚ್cಬಾಳೆ, ನೇಂದ್ರ, ಬೂದು, ಚಂದ್ರಬಾಳೆ ಸಹಿತ ವಿವಿಧ ಹಣ್ಣಿಗೆ ದರ ಏರಿಕೆಯಾಗಿದ್ದು, ಮಲೆನಾಡು, ಕರಾವಳಿ ಭಾಗದಲ್ಲಿ ಇಳುವರಿ ಕುಸಿತವಾದ ಹಿನ್ನೆಲೆಯಲ್ಲಿ ದರ ಇಳಿಕೆಯಾಗುತ್ತಿಲ್ಲ. ಕೆಜಿ ಒಂದಕ್ಕೆ 70-80 ಮತ್ತು 100 ರೂ.ವರೆಗೆ ಬಾಳೆ ಹಣ್ಣು ಮಾರಾಟವಾಗುತ್ತಿದೆ. ಪುಟ್ಬಾಳೆ ಹಣ್ಣು 90-100ಕ್ಕೆ ಕೆಜಿಗೆ ಮಾರಾಟವಾಗುತ್ತಿದೆ ಎಂದು ನಗರದ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ. ಉಡುಪಿ ಮಾರುಕಟ್ಟೆಗೆ ತೀರ್ಥಹಳ್ಳಿ, ಶಿವಮೊಗ್ಗ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆಯಾಗುತ್ತದೆ.