ಉಡುಪಿ : ಇಂದಿರಾನಗರ, 76-ಬಡಗುಬೆಟ್ಟುನ ಸರಕಾರಿ ಮೆಟ್ರಿಕ್ ಅನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಇನ್ನೊಂದು ಸರಕಾರಿ ಹಾಸ್ಟೆಲ್‌ನ ವಿದ್ಯಾರ್ಥಿಗಳು ಅಕ್ರಮವಾಗಿ ನುಗ್ಗಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಶಿವಮೊಗ್ಗ ಸಿಗಂಧೂರಿನ ನಿವಾಸಿ ತೆಂಕನಿಡಿಯೂರು ಕಾಲೇಜಿನಲ್ಲಿ ಬಿಎ ಓದುತ್ತಿರುವ ಭರತ್ ಹಲ್ಲೆಗೊಳಗಾದ ವಿದ್ಯಾರ್ಥಿ. ಫೆ. 6ರಂದು ರಾತ್ರಿ 8ರಿಂದ 10 ಮಂದಿ ಹುಡುಗರ ತಂಡವು ಬಡಗುಬೆಟ್ಟಿನಲ್ಲಿರುವ ಹಾಸ್ಟೆಲ್‌ಗೆ ಬಂದಿದ್ದು, ಹಾಸ್ಟೆಲ್ ಕಾವಲುಗಾರರನ್ನು ದೂಡಿ ಹಾಸ್ಟೆಲ್ ಒಳಗೆ ಅಕ್ರಮ ಪ್ರವೇಶ ಮಾಡಿ, ವರಾಂಡದಲ್ಲಿ ಓದುತ್ತಿದ್ದ ಭರತ್‌ನನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಕೀಳು ಜಾತಿಯವನೆಂದು ಜಾತಿ ನಿಂದನೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.