Advertisement

Udupi: ಕೊರಗರ ಬೇಡಿಕೆ ಪರಿಶೀಲನೆಗೆ ಉನ್ನತ ಮಟ್ಟದ ಸಭೆ

01:41 AM Aug 01, 2024 | Team Udayavani |

ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ಕರ್ನಾಟಕ ಕೇರಳ) ದಿಂದ ಕೊರಗ ಸಮುದಾಯದ ಭೂಮಿ ಹಕ್ಕು, ಉದ್ಯೋಗ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ವಿಧಾನ ಸಭೆ ಸ್ಪೀಕರ್‌ ಯು.ಟಿ. ಖಾದರ್‌ ಬುಧವಾರ ಭೇಟಿ ನೀಡಿ, ಮನವಿ ಸ್ವೀಕರಿಸಿದರು.

Advertisement

ಮುಂದಿನ 15 ದಿನಗಳೊಳಗೆ ಈ ಸಂಬಂಧ ಉನ್ನತ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು. ಕೊರಗ ಸಮುದಾಯದವರ ವಿದ್ಯಾರ್ಹತೆ ಮಾಹಿತಿ ಪಡೆದು ಚರ್ಚಿಸಿ ಹೊರಗುತ್ತಿಗೆ ಮೂಲಕ ನೇಮಕಾತಿ ಅವಕಾಶಗಳ ಬಗ್ಗೆ ಸಿಎಂ ಜತೆಗೆ ಚರ್ಚಿಸಲಾಗು ವುದು. ಈ ಸಮುದಾಯದ ಸಮಸ್ಯೆ ಹಾಗೂ ಬೇಡಿಕೆ ಈಡೇರಿಕೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಒಕ್ಕೂಟದ ಸುಶೀಲಾ ನಾಡ ಮಾತನಾಡಿ, ಉದ್ಯೋಗದಲ್ಲಿ ಪ್ರಾತಿನಿಧಿ ಕ ಮೀಸಲಾತಿ ನೀಡಬೇಕು. ಕೊರಗರ ಜನಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಮಹಮ್ಮದ್‌ ಪೀರ್‌ ವರದಿಯನ್ನು ಸರಕಾರ ಜಾರಿಗೊಳಿಸಬೇಕು. ಕೃಷಿ ಭೂಮಿ, ಉದ್ಯೋಗ ಭದ್ರತೆ ಕೊಡ ಬೇಕು. ಇಲ್ಲವಾದರೆ ಸ್ನಾತಕೋತ್ತರ ಪದವಿ ಮಾಡಿದ ಮಕ್ಕಳನ್ನು ಪಾಲಕರು ಬುಟ್ಟಿ ಹೆಣೆದು ಸಾಕಬೇಕಾದ ಪರಿಸ್ಥಿತಿ ಮುಂದುರಿಯಲಿದೆ ಎಂದು ಬೇಸರ ಹೊರಹಾಕಿದರು.

ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಕೆ., ಎಸ್ಪಿ ಡಾ| ಅರುಣ್‌ ಕೆ., ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಪ್ರಮುಖರಾದ ವೆರೋನಿಕಾ ಕರ್ನೆಲಿಯೊ, ಪಿ. ಯುವರಾಜ್‌, ಡಾ| ಸುನೀತಾ ಶೆಟ್ಟಿ, ಇಸ್ಮಾಯಿಲ್‌ ಆತ್ರಾಡಿ ಉಪಸ್ಥಿತರಿದ್ದರು.


ಕೊರಗರ ಪ್ರತಿಭಟನೆ ಮುಂದೂಡಿಕೆ

Advertisement

ಮಣಿಪಾಲ: ಕೊರಗ ಸಮುದಾಯ ಅಗತ್ಯ ಬೇಡಿಕೆ ಈಡೇರಿಸುವ ಸಂಬಂಧ ಮುಖ್ಯ ಮಂತ್ರಿ ಜತೆಗೆ ಸಭೆ ನಡೆಸುವ ಭರವಸೆ ಯನ್ನು ವಿಧಾನಸಭಾ ಸ್ಪೀಕರ್‌ ಖಾದರ್‌ ಅವರು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಮುಂದೂಡಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ (ಕರ್ನಾಟಕ ಕೇರಳ) ಕೊರಗ ಸಮುದಾಯದ ಭೂಮಿ ಹಕ್ಕು, ಉದ್ಯೋಗ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದೇವೆ. ಸಮುದಾಯದ ವಿದ್ಯಾವಂತರ ವಿವರನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದೇವೆ. ಗುತ್ತಿಗೆ ಆಧಾರದಲ್ಲಿ ನೇಮ ಕದ ಬಗ್ಗೆಯೂ ತಿಳಿಸಿದ್ದಾರೆ.

ಅಲ್ಲದೆ ವಿಧಾನಸಭಾ ಸಭಾಧ್ಯಕ್ಷರು ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಆಲಿಸಿ, ಸಿಎಂ ಜತೆ ಸಭೆ ನಡೆಸುವ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಪ್ರತಿ ಭಟನೆಯನ್ನು ಮುಂದೂಡಿದ್ದೇವೆ. ಸಭೆಯ ಅನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸುಶೀಲಾ ನಾಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next