ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯುತ್ತಿರುವ 2ನೇ ಹಂತದ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ರವಿವಾರ ( ಜೂ.26 ರಂದು) ಕಕ್ಕುಂಜೆ ಭಾಗದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ಚಾಪೆ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ರಾಷ್ಟ್ರದ ಗಮನ ಸೆಳೆದ ಉಡುಪಿಯಲ್ಲಿ ನಡೆದ ಹಡಿಲು ಭೂಮಿ ಕೃಷಿ ಆಂದೋಲನದ 2ನೇ ಹಂತದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ಕಕ್ಕುಂಜೆ ಭಾಗದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಸತಃ ತಾವೇ ನಾಟಿ ಯಂತ್ರವನ್ನು ಚಲಾಯಿಸಿ ಯಂತ್ರ ನಾಟಿ ಮಾಡಿದರು.
ಕೃಷಿ ಬಗೆಗಿನ ಇವರ ಅಸಕ್ತಿ ಮತ್ತು ಉತ್ಸಾಹ ರಾಜ್ಯದ ಇತರ ಶಾಸಕರಿಗೂ ಮಾದರಿಯಾಗಲಿ.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್, ಸ್ಥಳೀಯ ಕೃಷಿಕರಾದ ರವಿರಾಜ್ ಶೆಟ್ಟಿ, ರೋಹಿದಾಸ್ ಪೂಜಾರಿ, ನಾಗರಾಜ್, ಸ್ಥಳೀಯರಾದ ಪ್ರತಿಮಾ ನಾಯಕ್, ಸುಪ್ರಿಯಾ, ರೇಖಾ, ಕಿರಣ್ ಪೂಜಾರಿ, ಉಮೇಶ್, ಪ್ರವೀಣ್ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.