Advertisement
ಶ್ರೀಪಾದರು ಮತ್ತು ಮಠದ ಪಟ್ಟದ ದೇವರನ್ನು ಸುವರ್ಣ ಪಲ್ಲಕ್ಕಿಯೊಂದಿಗೆ ಸ್ವಾಗತಿಸಿ ಸಂಸ್ಕೃತ ಕಾಲೇಜಿನಿಂದ ರಥಬೀದಿವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಭಂಡಾರಕೇರಿ ಶ್ರೀಪಾದರಿಗೆ ಪುತ್ತಿಗೆ ಶ್ರೀಪಾದರು ಸಾಂಪ್ರದಾಯಿಕ ಸ್ವಾಗತ ಕೋರಿದರು. ರಾಜಾಂಗಣದಲ್ಲಿ ಸ್ವಾಗತ ಸಮಾರಂಭ ನಡೆಯಿತು.
Related Articles
Advertisement
ಮಧ್ವಾಚಾರ್ಯರಿಂದ ಜಗತ್ತಿಗೆ ಜ್ಞಾನದ ಬೆಳಕುಜಗತ್ತಿನ ಒಳಿತು ಮಾಡಲು ಭಗವಂತನ ಯೋಗ ನಿದ್ರೆಯ ಕಾಲವಿದು. ಇದರಿಂದ ಸಜ್ಜನರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಮಧ್ವಾಚಾರ್ಯರು ಜಗತ್ತಿಗೆ ಜ್ಞಾನದ ಬೆಳಕು ನೀಡಿದವರು. ತುಳುನಾಡಿನಲ್ಲಿ ಅವತಾರ ಎತ್ತಿದ ಅವರು ತೌಳವರು ಎಂಬ ಹೆಮ್ಮೆ ಇರಲಿ ಎಂದು ಭಂಡಾರಕೇರಿ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು. ಭಗವಂತನ ಉಪಾಸನೆಯಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತವೆ. ತಮ್ಮ ಅಪೇಕ್ಷೆಯಂತೆ ಭಂಡಾರಕೇರಿ ಶ್ರೀಪಾದರು ಉಡುಪಿಗೆ ಚಾತುರ್ಮಾಸ ವ್ರತ ಕೈಗೊಳ್ಳಲು ಆಗಮಿಸಿದ್ದಾರೆ. ಬಾಲ್ಯದ ಗುರುಕುಲ ಶಿಕ್ಷಣವನ್ನು ಜತೆಯಾಗಿ ಪಡೆದವರು ನಾವು ಎಂದು ಪುತ್ತಿಗೆ ಶ್ರೀಪಾದರು ಸ್ಮರಿಸಿದರು.