ಶಂಖಕ್ಕೆ ಬಹಳ ವೈಶಿಷ್ಟ್ಯವಿದೆ. ಶಂ= ಸುಖ, ಖ= ಆಕಾಶ. ಅಂದರೆ ಇದು ಸರ್ವತ್ರ ಸುಖ ನೀಡುವ ಸಾಧನ. “ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋ ಪಿ ವಾ|’ ಎಂಬಂತೆ ಪಾಪಪರಿಮಾರ್ಜನೆ ಶಂಖನಾದದಿಂದ ಸಾಧ್ಯ. ಶಂಖದಲ್ಲಿ ದೇವತೆಗಳು, ಲಕ್ಷ್ಮೀದೇವಿಯ ಸನ್ನಿಧಾನವಿದೆ.
ಬಲಮುರಿ ಶಂಖ ಇನ್ನೂ ವಿಶೇಷ. ಶಂಖನಾದವನ್ನು ಮಹಿಳೆಯರು ಸಂಧ್ಯಾಕಾಲದಲ್ಲಿ ಮನೆಯ ಮೂಲೆಮೂಲೆಗಳಲ್ಲಿ ಮಾಡುವ ಸಂಪ್ರದಾಯವಿದೆ. ಹೀಗೆ ಶಂಖವನ್ನು ಊದಬೇಕು. ರಾತ್ರಿ ಕಾಲ ಅಸುರರ ಕಾಲ, ಹಗಲು ದೇವತೆಗಳ ಕಾಲ. ಬೆಳಕಿರುವಲ್ಲಿ ದೇವತೆಗಳು, ಕತ್ತಲಿರುವಲ್ಲಿ ಅಸುರರು. ರಾತ್ರಿ ಕಾಲದಲ್ಲಿ ಅಸುರರು ಬರುವ ಮುನ್ನ ಅಂದರೆ ಸಂಧ್ಯಾಕಾಲದಲ್ಲಿ ಶಂಖವನ್ನು ಊದಬೇಕು.
ಅಸುರರು ಬರುವ ಮುನ್ನವೇ ಅವರನ್ನು ಬಾರದಂತೆ ತಡೆಯಬೇಕು. ಸಂಧ್ಯಾಕಾಲದಲ್ಲಿ ತಡೆದರೆ ಮತ್ತೆ ಅವರು ಬರುವುದಿಲ್ಲ. ಬಂದ ಬಳಿಕ ಇಂತಹವರನ್ನು ಓಡಿಸುವುದು ಕಷ್ಟ. ಕಾಯಿಲೆಗಳು ಇದಕ್ಕೆ ಉತ್ತಮ ಉದಾಹರಣೆ. ಕಾಯಿಲೆ ಬರುವ ಮುನ್ನ ಓಡಿಸುವುದು ಸುಲಭ, ಕಾಯಿಲೆ ಬಂದ ಬಳಿಕ ಓಡಿಸುವುದು ಬಹಳ ಕಷ್ಟ. ದೇವತೆಗಳು ಶಂಖದಲ್ಲಿದ್ದು ಅನುಗ್ರಹಿಸಬೇಕೆಂಬುದು ಭಗವಂತನ ಆಶಯ (ಶಂಖೇ ತಿಷ್ಠಂತಿ ವಿಪ್ರೇಂದ್ರ ತಸ್ಮಾತ್ ಶಂಖಂ ಪ್ರಪೂಜಯೇತ್). ಇಂತಹ ಶಂಖವನ್ನು ಶ್ರೀಕೃಷ್ಣನೇ ಊದುವ ಮೂಲಕ ಸರ್ವದೇವತೆಗಳ ಅನುಗ್ರಹವಿದೆ ಎಂಬುದನ್ನು ಸಾರಿದ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811