Advertisement
ಸಮಸ್ಯೆಗಳು ಬಂದಾಗ ವಿಕಲ್ಪ ಮಾಡಿದರೆ ಅದರ ಪ್ರಮಾಣವನ್ನು ಕಡಿಮೆಯಾಗುತ್ತದೆ. ಆದ್ದರಿಂದ ಕೃಷ್ಣ “ನಿನ್ನ ದುಃಖ ದೇಹ ನಾಶವಾಗುತ್ತದೆಂದೋ? ಆತ್ಮ ನಾಶವಾಗುತ್ತದೆಂದೋ? ‘ ಎಂದು ಕೇಳಿ ವಿಕಲ್ಪಗೊಳಿಸುತ್ತಾನೆ. ದೇಹವೂ, ಆತ್ಮವೂ ನಾಶವಿಲ್ಲದಿರುವಾಗ ಸಮಸ್ಯೆ ಏನು ಎಂದುತ್ತರಿಸುತ್ತಾನೆ. ಒಂದು ಸಮಸ್ಯೆಯನ್ನು ಹೇಗೆ ಬಗೆ ಹರಿಸಬೇಕು ಎನ್ನುವುದಕ್ಕೆ ಕೃಷ್ಣ ಉತ್ತಮ ಉದಾಹರಣೆ. ಜನನ ಮರಣ ಜೀವಿಗಳಿಗೆ ಮಾತ್ರ ಭಗವಂತನಿಗೆ ಇಲ್ಲ ಎಂದು ಸ್ಕಾಂದ ಪುರಾಣದಲ್ಲಿ ಸ್ಪಷ್ಟಪಡಿಸಲಾಗಿದೆ. ಭಗವಂತನಿಗೆ ದೇಹವಿಲ್ಲ, ಆತ ನಿತ್ಯ. ಆತನಿಗೆ ದೇಹನಾಶವಾಗುವ ಪ್ರಶ್ನೆಯೇ ಬರುವುದಿಲ್ಲ. ಅಲ್ಲಿ ಅರ್ಜುನ ಮಾತ್ರ ಇದ್ದದ್ದು. ಆತನಿಗಾದರೋ ವೇದಾಂತ ಗೊತ್ತಿತ್ತು. ಆತನನ್ನು ನಿಮಿತ್ತ ಮಾಡಿಕೊಂಡು ಉಳಿದವರಿಗೂ ಕೃಷ್ಣ ಉತ್ತರಿಸಿದ್ದ. “ದೇಹ ಹೋಗುತ್ತದೆ ಹೌದು, ಆದರೆ ಇದುವರೆಗಿನ ಒಡನಾಟದಿಂದ ಸ್ಮರಣೆಗೆ ಬರುತ್ತದಲ್ಲ’ ಎಂಬ ಸಂಶಯಕ್ಕೂ ಉತ್ತರಿಸುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811