Advertisement
ಅಂದ ಹಾಗೆ ಇದು ಇವರ 18ನೇ ವರ್ಷದ ಯಾತ್ರೆ!ದಿ| ವಿಲಿಯಂ ಸೆರಾವೋ, ದುಲ್ಸಿನ್ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್ ನದ್ದು ಎಲೆಕ್ಟ್ರಿಕಲ್ ವೃತ್ತಿ. 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿ ದರು. ಕೊರೊನಾ ಸಂದರ್ಭ ದಲ್ಲೂ ಅಯ್ಯಪ್ಪನ ದರ್ಶನ ತಪ್ಪಿಸಲಿಲ್ಲ. ಅಜಿತ್ ಹಿಂದಿನ 17 ವರ್ಷಗಳಲ್ಲಿ 5 ಬಾರಿ ದಟ್ಟ ಕಾನನ ದಾರಿಯಲ್ಲಿ ಸಾಗಿ ಅಯ್ಯಪ್ಪನ ದರ್ಶನ ಮಾಡಿದರು. ತಂದೆ ತೀರಿಕೊಂಡ ವರ್ಷ ಮಾಲೆ ಧರಿಸಿರಲಿಲ್ಲ.