ಮಹಾಭಾರತ ಯುದ್ಧ ಮೊದಲು ಹೊರಟದ್ದು ಧರ್ಮಸಂಸ್ಥಾಪನೆಗೆ, ಅನ್ಯಾಯದ ವಿರುದ್ಧ ಹೋರಾಟ ಎಂದು. ಅಜ್ಞಾತವಾಸ ಮುಗಿದ ಬಳಿಕ ಅರ್ಜುನನ್ನು ಗುರುತಿಸಿದ್ದೇವೆ, ಶರ್ತ ತಪ್ಪಿದ್ದೀರಿ ಎನ್ನುವುದು ದುರ್ಯೋಧನನ ಕಡೆಯವರ ವಾದ.
ಹೀಗೆ ಅನ್ಯಾಯದ ವಿರುದ್ಧ ಹೋರಾಟ ಮುಖ್ಯ ಉದ್ದೇಶವೆಂದು ಹೊರಟದ್ದಾದರೂ ಆತನಿಗೆ ಶಿಕ್ಷೆ ಸಿಗುತ್ತದೆ ಎನ್ನುವಾಗ ಎಲ್ಲರನ್ನೂ ಕೊಲ್ಲುತ್ತಿದ್ದೇವೆ, ಪಾಪ ಬರುತ್ತಿದೆ ಎನ್ನುತ್ತಿದ್ದಾನೆ ಅರ್ಜುನ.
ಹಾಗೆ ನೋಡಿದರೆ ಅನ್ಯಾಯದ ವಿರುದ್ಧ ಹೋರಾಟ ಎನ್ನುವುದು ಕೃಷ್ಣನಿಗೆ ಮಾತ್ರ ಇದ್ದದ್ದು. ಉಳಿದವರಿಗೆ ರಾಜ್ಯ ಸಿಗಬೇಕೆಂಬ ಗುರಿ ಕಂಡುಬರುತ್ತಿದೆ. ಧರ್ಮಸಂಸ್ಥಾಪನೆಗೋಸ್ಕರ ಯುದ್ಧ ಮಾಡಿದ್ದು ಕೃಷ್ಣ ಮತ್ತು ಭೀಮಸೇನ ಮಾತ್ರ. ಉಳಿದವರು ಸೋತರೆ ನಾವು ಜವಾಬ್ದಾರರಲ್ಲ, ಗೆದ್ದರೆ ನಾವೇ ಜವಾಬ್ದಾರರು, ನಮ್ಮ ಪಾಲಿನದ್ದು ನಮಗೆ ಸಿಗುತ್ತದೆ ಎಂದು ಸೂಕ್ಷ್ಮವಾಗಿ ವಿಮರ್ಶಿಸಿದರೆ ತೋರುತ್ತದೆ.
ಕುಲಧರ್ಮ, ಕುಲಕ್ಷಯವಾಗುತ್ತದೆ ಎಂಬ ಮಾತು ರಾಜ್ಯಲೋಭದ ರೂಪದಲ್ಲಿ ಕಾಣುತ್ತದೆ. ಮೇಲ್ನೋಟಕ್ಕೆ ಸಮಾಜದ ಕಳಕಳಿ ಕಂಡುಬಂದರೂ ರಾಜ್ಯ ಸುಖ ಬೇಕು ಎಂಬ ಭಾವ ಕಂಡುಬರುತ್ತದೆ. ಬಂಧುಗಳಿಲ್ಲದಿದ್ದರೆ ಜಯ ಗಳಿಸಿದರೂ ಏನು ಸುಖ? ಸುಖ ಸಿಗುವಾಗ ನಮ್ಮವರು ಎಂಜಾಯ್ ಮಾಡಬೇಕೆಂಬ ಭಾವನೆ ಕಂಡುಬರುತ್ತದೆ. ನಮ್ಮವರಾದವರು ನಮಗೆ ಸುಖ ಸಿಗುವಾಗ ಕಾಣಬೇಕು ಎಂಬುದು ಅರ್ಜುನನ ಇರಾದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,ಉಡುಪಿ ಸಂಪರ್ಕ ಸಂಖ್ಯೆ: 8055338811