Advertisement

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

01:20 AM Sep 23, 2024 | Team Udayavani |

ಭಗವಂತನ ಆನಂದೋದ್ರೇಕ ನಿಯಂತ್ರಿತವಾಗಿರುತ್ತದೆ, ಅದು ಪ್ರಜ್ಞಾಪೂರ್ವಕವಾದ ಆನಂದ, ಜ್ಞಾನಾತ್ಮಕ ಆನಂದ. ಮನುಷ್ಯರದ್ದು ಹಾಗಲ್ಲ, ಅನಿಯಂತ್ರಿತ. ನಮಗೆ ಆನಂದವಾದರೆ ಏನೇನೋ ಆಗುತ್ತದೆ. ಯಾರು ಸರ್ವೋತ್ತಮತ್ವವನ್ನು ತಿಳಿದುಕೊಳ್ಳುವುದಿಲ್ಲವೋ ಅವರು ಸರ್ವೋತ್ತಮರು ಆಗುವುದಿಲ್ಲ. ಯಾರು ಆದರ್ಶಪುರುಷರಿಗೆ (ಮಹಾತ್ಮರಿಗೆ) ಗೌರವ ಕೊಡುವುದಿಲ್ಲವೋ ಅವರು ಆದರ್ಶಪುರುಷರು ಆಗುವುದಿಲ್ಲ. ಆದ್ದರಿಂದ ಭಗವಂತ ತನ್ನ ಜ್ಞಾನ ಯಾರಿಗೆ ಇದೆಯೋ ಅವರಿಗೆ ಮೋಕ್ಷ ಪ್ರದಾನ ಮಾಡುತ್ತಾನೆ. ಆದ್ದರಿಂದ ಭಗವಜ್ಞಾನಾದೇವ ಮೋಕ್ಷಃ… ಎಂಬುದು ಪ್ರಮಾಣಗಳಿಂದ ವ್ಯಕ್ತವಾಗಿದೆ. ಅಪರೋಕ್ಷ ಜ್ಞಾನವಾದ ಮೇಲೂ (ಜ್ಞಾನಿಗಳೂ ಕೂಡ) ನಿಷ್ಕಾಮ ಕರ್ಮ ಮಾಡಬೇಕು. ಪರೀಕ್ಷೆ ಬಳಿಕವೂ ಓದಬೇಕು ಎಂಬಂತೆ ಇದು.

Advertisement

ಸಮಾಧಿಯಲ್ಲಿದ್ದವರಿಗೆ ಮಾತ್ರ ವಿನಾಯಿತಿ. ಅರ್ಜುನನೊಬ್ಬ ಅಪರೋಕ್ಷಜ್ಞಾನಿ. ಇದರ ಜತೆ ಆತನಿಗೆ ವಿಶ್ವರೂಪದರ್ಶನದ ಭಾಗ್ಯವೂ ಆಗುತ್ತದೆ. ಇದಕ್ಕೆ ಕಾರಣ ಆತನಲ್ಲಿದ್ದ ದೈವೀ ಸಂಪತ್ತು. ದೈವೀಸಂಪತ್ತು ಇರುವವರಿಗೆ ದೇವರ ಸ್ಮರಣೆ ಬಂದೇ ಬರುತ್ತದೆ. ಶಿಕ್ಷೆ ಕೊಡುವಾಗಲೂ ಭಗವಂತ ಕರುಣೆಯಿಂದಲೇ ಕೊಡುವುದು. ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟದ್ದರಿಂದ ಸಜ್ಜನರಿಗೆ ಒಳಿತಾಗುತ್ತದೆ. ಬರೆಯದಿದ್ದವರಿಗೂ ಅಂಕ ಕೊಟ್ಟರೆ ಬರೆದವರಿಗೆ ಅನ್ಯಾಯ ಆಗುತ್ತದೆ. ಸಜ್ಜನರಿಗೆ ಯಾವತ್ತೂ ಅನ್ಯಾಯವಾಗಬಾರದೆಂದೇ ಭಗವಂತನಿಗೆ ಅಷ್ಟೂ ಕರುಣೆ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next