Advertisement

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

06:13 PM Dec 30, 2024 | Team Udayavani |

ಚಿಕ್ಕಪ್ರಾಯದಿಂದಲೇ ಅವರಲ್ಲಿ ಅಹಂಕಾರವನ್ನು ಜಾಸ್ತಿ ಮಾಡಲು ಬಿಡಬಾರದು. ಇಂದಿನ ಅವನತಿಗೆ ಆಧುನಿಕ ಶಿಕ್ಷಣ ಮಕ್ಕಳ “ಇಗೋ’ವನ್ನು ಬೂಸ್ಟ್‌ ಮಾಡುತ್ತಿರುವುದು ಕಾರಣ. ಹಿಂದೆ ಹೀಗಿರಲಿಲ್ಲ. ಮಕ್ಕಳನ್ನು ಎತ್ತಿ ಹಿಡಿದರೆ ವ್ಯಕ್ತಿತ್ವ ಕಡಿಮೆಯಾಗುತ್ತದೆ ಎಂಬ ಅರಿವು ಇತ್ತು. ಪಾಶ್ಚಾತ್ಯ ಸಂಸ್ಕೃತಿ, ಶಿಕ್ಷಣಕ್ರಮಕ್ಕೂ ಪೌರ್ವಾತ್ಯ ಸಂಸ್ಕೃತಿ, ಶಿಕ್ಷಣಕ್ರಮಕ್ಕೂ ಇದೇ ವ್ಯತ್ಯಾಸ. ಇಗೋ ಹೆಚ್ಚು ಮಾಡಿದರೆ ತಂದೆತಾಯಿಗಳಿಗೆ ಮಾತ್ರವಲ್ಲ, ಲೋಕಕ್ಕೂ ಅಪಾಯವಿದೆ. ವೇದಾಂತದ ತಿರುಳೇ ಅಭಿಮಾನವನ್ನು ಕಡಿಮೆ ಮಾಡುವುದು.

Advertisement

“ಇದಾವುದೂ ನಿಜವಾಗಿ ನಿನ್ನದಲ್ಲ. ಆದ್ದರಿಂದ ನನ್ನದು ಎಂಬ ಅಭಿಮಾನಕ್ಕೆ ನೆಲೆ ಇಲ್ಲ. ಅಂತಹ ಅಪಾಯಕಾರಿ ಅಭಿಮಾನ ಏಕೆ ಬೇಕು?’ -ಶ್ರೀಕೃಷ್ಣನ ಅಭಿಮತವಿದು. ಅಭಿಮಾನ ಗಟ್ಟಿಯಾದಂತೆ ತೆಗೆಯುವುದು ಕಷ್ಟವಾಗುತ್ತದೆ. “ಇಗೋ’ ಎನ್ನುವುದು ರಾಜಸಿಕ, ತಾಮಸಿಕ. ಆದ್ದರಿಂದ “ಇದಂ ನ ಮಮ’ ಎಂಬಂತೆ ಹೆಜ್ಜೆ ಹೆಜ್ಜೆಗೂ ಅನುಸಂಧಾನ ಮಾಡಿಕೊಳ್ಳಬೇಕು. ಕೌಮಾರ್ಯವನ್ನಾಗಲೀ, ಯೌವ್ವನವನ್ನಾಗಲೀ, ವಾರ್ಧಕ್ಯವನ್ನಾಗಲೀ ನಾವು ಮಾಡುವುದೋ? ಅದು ಸಹಜವಾಗಿ ಬರುತ್ತದೆ. ಸಹಜವಾಗಿ ಆಗುವುದಕ್ಕೆ ದುಃಖಪಡುವ ಅಗತ್ಯವಿಲ್ಲ. ಯಾವುದು ಅಸಹಜವೋ ಅದಕ್ಕೆ ದುಃಖ. ಯಾವುದು ನಮ್ಮದಲ್ಲವೋ ಅದಕ್ಕಾಗಿ ದುಃಖಪಡಬೇಕಾದ ಅಗತ್ಯವೇ ಇಲ್ಲ. ಹಾಗಾದರೆ ಸುಮ್ಮನೆ ಕುಳಿತುಕೊಳ್ಳುವುದೋ? ಅಲ್ಲ, ಕರ್ತವ್ಯ ಮಾಡಲೇಬೇಕೆಂಬ ಸಂದೇಶವೂ ಇದೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next