Advertisement
ಗೀತೆಯ 4ನೆಯ ಶ್ಲೋಕದಿಂದ 7ರ ವರೆಗೆ ಇವರ ಪಟ್ಟಿಯನ್ನು ಹೇಳಿದರೆ, 8-9ನೇ ಶ್ಲೋಕದಲ್ಲಿ ತನ್ನ ಕಡೆಯವರಾದ ದ್ರೋಣ, ಭೀಷ್ಮ, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೌಮದತ್ತಿಯರನ್ನು ಬಣ್ಣಿಸುತ್ತಾನೆ. ಪಾಂಡವರಲ್ಲಿ ಸುಮಾರು 18 ಜನರನ್ನೂ, ತನ್ನ ಕಡೆಯ ಏಳು ಮಂದಿಯ ಹೆಸರನ್ನೂ ಹೇಳುತ್ತಾನೆ. 11 ಅಕ್ಷೋಹಿಣಿ ಸೈನ್ಯದಲ್ಲಿ ಕಡಿಮೆ ನಾಯಕರೂ, ಏಳು ಅಕ್ಷೋಹಿಣಿ ಸೈನ್ಯದಲ್ಲಿ ಹೆಚ್ಚು ನಾಯಕರು ದುರ್ಯೋಧನನಿಗೆ ಕಾಣುತ್ತಿರುವುದು ಮಾನಸಿಕ ಸಮತೋಲನವನ್ನು ಕಳೆದುಕೊಂಡದ್ದರ ಲಕ್ಷಣ. ಪಾಂಡವರಲ್ಲಿ ಭೀಮಾರ್ಜುನರರನ್ನು ತನ್ನ ಸಮಾನರಾಗಿ ಕಾಣುತ್ತಾನೆ. ಯುಯುಧಾನನೊಬ್ಬ ಯುವಕ. ಅಭಿಮನ್ಯು ಇನ್ನೂ ಹುಡುಗ, ಉಳಿದವರೆಲ್ಲರೂ ವಯೋವೃದ್ಧರು. ಇವರಲ್ಲಿ ವಿರಾಟ, ದ್ರುಪದ ಭೀಮಾರ್ಜುನರಲ್ಲಿ ಹಿಂದೆ ಸೋಲು ಕಂಡವರೆ. ಕೌರವರ ಪಟ್ಟಿ ಹೇಳುವಾಗ ಸೇನಾಪತಿ ಭೀಷ್ಮರನ್ನು ಬಿಟ್ಟು ಮೊದಲು ದ್ರೋಣರ ಹೆಸರು ಹೇಳುವುದು ಕುಹಕದ ನುಡಿ. ಭಯವಿದ್ದಾಗ ಚಿಕ್ಕದು ದೊಡ್ಡದಾಗಿಯೂ, ಸಲುಗೆ, ಪ್ರೀತಿ ಇದ್ದಾಗ ದೊಡ್ಡದು ಚಿಕ್ಕದಾಗಿಯೂ ಕಾಣುತ್ತದೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811