Advertisement
ರಾಗವಿದ್ದರೆ ಶೀತ, ದ್ವೇಷವಿದ್ದರೆ ಉಷ್ಣ. ಇದು ದುಃಖಕ್ಕೆ ಕಾರಣ. ಕಚೇರಿಯಲ್ಲಿ ಏನೋ ಕಿರಿಕಿರಿಯಾಗಿ ಮಕ್ಕಳ ಮೇಲೆ ಸಿಟ್ಟುಕೊಂಡು ತಂದೆ ಹೊಡೆಯುತ್ತಾನೆ. ಇದರರ್ಥ ಮಕ್ಕಳನ್ನು ದ್ವೇಷಿಸುತ್ತಾನೆಂದೆ? ಅಲ್ಲ. ಬಂಧುಗಳು ಸತ್ತದ್ದರಿಂದ ಅರ್ಜುನನಿಗೆ ದುಃಖವಲ್ಲ. ರಾಗದ್ವೇಷದಿಂದ, ಅಭಿಮಾನದಿಂದ ದುಃಖವಾದದ್ದು. ಜಗತ್ತಿನಲ್ಲಿ ದಿನವೂ ಅದೆಷ್ಟೋ ಜನ ಸಾಯಬಹುದು, ಅದೆಷ್ಟೋ ಜನ ಹುಟ್ಟಬಹುದು. ಸತ್ತದ್ದಕ್ಕೆ ದುಃಖ ವ್ಯಕ್ತವಾಗುತ್ತದೋ? ಹುಟ್ಟಿದವರಿಗೆ ಹುಟ್ಟುಹಬ್ಬ ಆಚರಿಸುತ್ತಾರಾ? ನಮ್ಮ ಸಂಬಂಧಿಕರಾದರೆ ದುಃಖ, ಸುಖವಾಗುತ್ತದೆ. ಅಲ್ಲಿ ಅಟ್ಯಾಚ್ಮೆಂಟ್ ಇರುವುದರಿಂದ ಹೀಗಾಗುತ್ತದೆ. ವಾಸ್ತವದಲ್ಲಿ ಯಾರು ಯಾರಿಗೂ ಸಂಬಂಧವೇ ಇಲ್ಲ. ಇವರನ್ನು ಬಂಧುಗಳೆಂದು ತಿಳಿದುಕೊಂಡದ್ದೇ ತಪ್ಪು. ವಾಸ್ತವದ ಮೇಲೆ ನಿರ್ಧಾರ ಮಾಡಬೇಕು. ಹುಟ್ಟುವಾಗ ನಾವೇನಾದರೂ ತಂದಿದ್ದೇವಾ? ಆಮೇಲೆ ನನ್ನದೆನ್ನಲೇನರ್ಥ?
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811