Advertisement
ಇಂತಹವರಿಗೆ ಎಷ್ಟು ದೃಢತೆ ಇರುತ್ತದೆ ಎಂದರೆ ನಮ್ಮ ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರನ್ನು ನೋಡಬೇಕು. “ನನಗೆ ತೊಂದರೆ ಮಾಡಿದ, ಹಾಗಾಯಿತು, ಹೀಗಾಯಿತು’ ಎಂದು ಹೇಳಿದರೆ “ನಿನಗೇಕೆ ಚಿಂತೆ? ಅವರ ಪುಣ್ಯ ನಿನಗೆ ಬಂತಲ್ಲ? ನಿನ್ನ ಪಾಪ ಅವನಿಗೆ ಹೋಯಿತು’ ಎನ್ನುತ್ತಿದ್ದರು. ಗಾಬರಿಯಾಗುವ ಪ್ರಶ್ನೆ ಇಲ್ಲ. ತೊಂದರೆ ಮಾಡಿದವ ಚೆನ್ನಾಗಿದ್ದಾನಲ್ಲ ಎಂದರೆ ಕರ್ಮ ಸಿದ್ಧಾಂತ ಒಪ್ಪಿದರಾಯಿತು. ಅದಕ್ಕಾಗಿಯೇ ದಾಸರು “ನಿಂದಕರಿರಬೇಕು…’ ಎಂದು ಹೇಳಿದರು. “ಧೀರಸ್ತತ್ರ ನ ಮುಹ್ಯತಿ’ ಎನ್ನುವುದು ಅರ್ಥಗರ್ಭಿತ. ಇದನ್ನು ಶ್ರೀಮದಾಚಾರ್ಯರು ಚೆನ್ನಾಗಿ ವಿವರಿಸಿದ್ದಾರೆ. “ನಿನಗೆ ಪರಲೋಕದ ಬಗ್ಗೆ ಸಂಶಯವಿದೆ, ದೇಹಾಭಿಮಾನವೂ ಇದೆ. ಇವೆರಡನ್ನು ಬಿಟ್ಟುಬಿಡು’ ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811