Udupi: ಚೂರ್ಣೋತ್ಸವ; ಜೀವನದ ಅತ್ಯಂತ ಆನಂದದ ಕ್ಷಣ: ಪುಂಡರೀಕ ಗೋಸ್ವಾಮಿ
Team Udayavani, Jan 15, 2025, 11:02 PM IST
ಉಡುಪಿ: ಮಧ್ವಾಚಾರ್ಯರ ಸಂಪ್ರದಾಯದ ಕೇಂದ್ರ ಸ್ಥಾನವಾದ ಶ್ರೀಕೃಷ್ಣಮಠದ ವಾರ್ಷಿಕ ಸಪ್ತೋತ್ಸವದ ಚೂರ್ಣೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪ್ರಾಪ್ತವಾದುದು ನಮ್ಮ ಜೀವನದ ಸರ್ವೋತ್ತಮ ದಿನ, ಆನಂದದ ಕ್ಷಣ ಎಂದು ಶ್ರೀಕೃಷ್ಣ ನಲಿ ದಾಡಿದ ಸ್ಥಳವಾದ ಉತ್ತರ ಪ್ರದೇಶದ ವೃಂದಾವನದಿಂದ ಆಗಮಿಸಿದ ಅಲ್ಲಿನ ರಾಧಾರಮಣ ಮಂದಿರದ ಮಾಧ್ವ ಗೌಡೀಯ ಸಂಪ್ರದಾಯ ಮಠದ ಮುಖ್ಯಸ್ಥ, ಹೆಸರಾಂತ ಪ್ರವಚನಕಾರ ಡಾ|ಪುಂಡರೀಕ ಗೋಸ್ವಾಮಿ ಅವರು ಧನ್ಯತೆ ವ್ಯಕ್ತಪಡಿಸಿದರು.
ಬುಧವಾರ ಚೂರ್ಣೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಅಭಿನಂದನೆ ಮತ್ತು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಅಜ್ಜ ಪುತ್ತಿಗೆ ಸ್ವಾಮೀಜಿಯವರ ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆಯನ್ನು ಪಡೆದಿರುವುದನ್ನು ಸ್ಮರಿಸಿ, ಉತ್ತರ ಭಾರತದ ತಮ್ಮ ಸಂಪ್ರದಾಯಕ್ಕೂ ದಕ್ಷಿಣದ ಮಾಧ್ವ ಸಂಪ್ರದಾಯಕ್ಕೂ ಸೇತುವಾಗಿ ಈ ಸಂಬಂಧ ಮುಂದುವರಿಯಲಿ ಎಂದು ಹಾರೈಸಿದರು.
ಆಶೀರ್ವಚನ ನೀಡಿದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಕೃಷ್ಣ ಬಾಲ್ಯವನ್ನು ಕಳೆದ ಸ್ಥಳ ವೃಂದಾವನ. ಆದರೆ ಕಾರ್ಯಬಾಹುಳ್ಯದಿಂದ ಅವನಿಗೆ ಮತ್ತೆ ಅಲ್ಲಿಗೆ ಹೋಗಲಾಗಲಿಲ್ಲ. ಶ್ರೀಕೃಷ್ಣನ ವಿಗ್ರಹ ಉಡುಪಿಯಲ್ಲಿ ಶ್ರೀಮಧ್ವಾಚಾರ್ಯರಿಂದ ಪ್ರತಿಷ್ಠಾಪನೆ ಆಗುವಂತಾಯಿತು. ಈಗ ವೃಂದಾ ವನದ ಮೂಲ ಗೋಸ್ವಾಮಿ ಯವರ ಪ್ರತಿನಿಧಿಯಾಗಿ ಪುಂಡರೀಕ ಗೋಸ್ವಾಮಿಯವರ ಉಪಸ್ಥಿತಿಯಲ್ಲಿ ತಮ್ಮ ನಾಲ್ಕ ನೆಯ ಪರ್ಯಾಯದ ಪೂರ್ವಾರ್ಧದ ಕೃಷ್ಣಾರ್ಪಣ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪ್ರಸಿದ್ಧ ವೈದ್ಯ ಡಾ| ತನ್ಮಯ ಗೋಸ್ವಾಮಿ ಶುಭ ಕೋರಿದರು. ವಿ| ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಮರುತ ಆಚಾರ್ಯ ಅಭಿನಂದನಪತ್ರ ವಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಜೋಡುರಸ್ತೆಯ ಫ್ಲ್ಯಾಟ್ ನಲ್ಲಿ ಅಗ್ನಿ ಆಕಸ್ಮಿಕ; 6 ಲಕ್ಷ ರೂ ನಷ್ಟ
Kaup: ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಫೆ. 4 ರಂದು ನವಚಂಡೀಯಾಗ
Udupi: ಒಳಕಾಡು ಶಾಲೆಯ ವಿದ್ಯಾರ್ಥಿಗಳ ಮೇಲೆ ಜೇನು ದಾಳಿ; 40 ವಿದ್ಯಾರ್ಥಿಗಳಿಗೆ ಗಾಯ
Manipal: ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಆನ್ಲೈನ್ನಲ್ಲಿ ವಂಚನೆ
Udupi: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ: ಜ. 31ಕ್ಕೆ ವಾದ ಮಂಡನೆ