ನಾಟಕದಲ್ಲಿ ಒಮ್ಮೆ “ರಾವಣ ಬೀಳಲು ತಯಾರೇ ಇರಲಿಲ್ಲ. ನನ್ನ ದುಡ್ಡು ಬಾರದೆ ಇದ್ದರೆ ಬೀಳುವುದೇ ಇಲ್ಲ ಎಂದು ಪಟ್ಟು ಹಿಡಿದ’. ಕೊನೆಗೆ ದುಡ್ಡು ವಸೂಲಿ ಮಾಡಿ ಬಿದ್ದಂತೆ ನಾಟಕ ಮಾಡಿದ. ನಾಟಕದಲ್ಲಿ ಮಾತ್ರ ಹೀಗೆ. ನಿಜವಾಗಿ ಹೀಗಲ್ಲ. ಕೃಷ್ಣನಿಗೆ ಏನೂ ಆಗುವುದಿಲ್ಲ ಎಂದು ಅರ್ಜುನನಿಗೆ ಗೊತ್ತಿತ್ತು.
“ನನಗೆ ಏನೂ ಆಗುವುದಿಲ್ಲ ಎಂದು ಗೊತ್ತಲ್ಲ. ಆದ್ದರಿಂದ ಬೇರೆಯವರಿಗೂ ಏನೂ ಆಗುವುದಿಲ್ಲ’ ಎಂದ ಕೃಷ್ಣ. ಕೌರವರು, ಬಂಧುಗಳು ಸಾಯುತ್ತಾರಲ್ಲ ಎಂದು ಹೇಳಿದೆಯೇ ವಿನಾ ಕೃಷ್ಣ ಸಾಯುತ್ತಾನಲ್ಲ ಎಂದು ಹೇಳಿದೆಯಾ? ನಾನು ಹೇಗೆ ಇಲ್ಲ ಎಂದು ಆಗುವುದಿಲ್ಲವೋ ಎಲ್ಲರೂ ಇಲ್ಲ ಎಂದು ಆಗುವುದಿಲ್ಲ ಎಂದು ತನ್ನ ದೃಷ್ಟಾಂತವನ್ನೇ ಕೃಷ್ಣ ಕೊಟ್ಟ. ದೇಹವನ್ನೇ ಆತ್ಮ ಎಂದು ತಿಳಿಯುವುದೇ ಈ ದುಃಖಕ್ಕೆ ಕಾರಣ. ಆತ್ಮವನ್ನು ಪ್ರೀತಿ ಮಾಡಿದರೆ ಹೀಗೆ ಆಗುವುದಿಲ್ಲ. ನಾವು ವ್ಯಕ್ತಿಯನ್ನೇ ಆಕಾರವೆಂದು ಸ್ವೀಕರಿಸುವುದು ಮಾಡುವ ತಪ್ಪು.
ಆದ್ದರಿಂದ ಹೆಣ ಸುಡುವಾಗಲಂತೂ ಪೂರ್ಣ ದುಃಖವಾಗುತ್ತದೆ. ನಾವು ಹೆಣದ ಶರೀರವನ್ನು ವ್ಯಕ್ತಿ ಎಂದು ತಿಳಿದಿರುತ್ತೇವೆ. ಆತ್ಮಪ್ರೀತಿಯನ್ನು ಕಲಿ, ದೇಹಪ್ರೀತಿ ಬಿಡು. ಆಗ ದುಃಖಕ್ಕೆ ಅವಕಾಶವಿಲ್ಲ. ಆತ್ಮವನ್ನು ಪ್ರೀತಿಸಿದರೆ, ಆತ್ಮ ಇಲ್ಲ ಎಂದು ಆಗೋದೇ ಇಲ್ಲ. ನಾನೂ ಎಂದೂ ಇಲ್ಲ ಎಂದು ಆಗುವುದಿಲ್ಲ. ಇಷ್ಟಕ್ಕೇ ನಿಲ್ಲದೆ ಎಂದೆಂದೂ (ಏವ) ಎಂಬ ಶಬ್ದವನ್ನು ಬಳಸಿದ್ದಾನೆ. ಒಂದೇ ಒಂದು ಸಂಶಯ ಬಾರದಂತೆ ಉತ್ತರಿಸುವುದು ಕೃಷ್ಣನ ಶೈಲಿ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811