Advertisement
ಹೇಳುವವರಿಲ್ಲದಿರುವಾಗ ಜ್ಞಾನ ಬರುವುದು ಬೇರೆ. ಇದು ಸಾಕ್ಷಾತ್ಕಾರದಿಂದ ಮಾತ್ರ ಸಾಧ್ಯ. ದೇವರಿದ್ದಾನೆ ಎಂದು ಎಲ್ಲರಿಗೂ ಗೊತ್ತು. ಸಾಕ್ಷಾತ್ಕಾರವಾದಾಗ ಬರುವ ಜ್ಞಾನದ ಅನುಭೂತಿಯೇ ಬೇರೆ. ನಾನು ಹುಟ್ಟಿಲ್ಲ, ನಾನು ಸ್ಥಿತ್ಯಂತರವೇ ವಿನಾ ವಸ್ತ್ವಂತರವಲ್ಲ. ಒಂದೇ ವಸ್ತು ಬೇರೆ ಬೇರೆ ರೀತಿ ಕಾಣುತ್ತದೆ. ಈ ರಾಜರು ಹಿಂದೆ ಎಲ್ಲಿಯೂ ಇಲ್ಲ ಎಂದು ಆದದ್ದಿಲ್ಲ. ಮುಂದೆಯೂ ಇಲ್ಲ ಎಂದೂ ಆಗುವುದಿಲ್ಲ. ಅಂದರೆ ಜೀವರಿಗೆ ನಾಶವಿಲ್ಲ ಎಂದು ಕೃಷ್ಣ ಹೇಳುತ್ತಾನೆ. ನಂಬುವುದು ಹೇಗೆ? ನಾನೇ ಸಾಕ್ಷಿ ಎನ್ನುತ್ತಾನೆ. ಅಯ್ಯೋ ಕೃಷ್ಣ ಸಾಯ್ತಾನಲ್ಲ ಎಂದು ಅರ್ಜುನ ಹಿಂದೆ ಹೇಳಿದ್ದನೆ? ದ್ರೋಣ, ಭೀಷ್ಮಾಚಾರ್ಯರು ಹೋಗುತ್ತಾರಲ್ಲ ಎಂದು ಹೇಳಿದ್ದನಲ್ಲ? ಅದಕ್ಕಾಗಿಯೇ ತನ್ನನ್ನೇ ಸಾಕ್ಷಿಯಾಗಿ ಸವಾಲೊಡ್ಡುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Related Articles
Advertisement