ಭಗವದ್ಗೀತೆಯ ಮೊದಲ ಇಡೀ ಒಂದು ಅಧ್ಯಾಯ ಅರ್ಜುನನ ದುಗುಡಗಳನ್ನು ಶ್ರೀಕೃಷ್ಣ ಕೇಳಿದ. ಅಧ್ಯಾಯ ಪೂರ್ತಿ ಅರ್ಜುನನ ವಾದಗಳೇ. ಅರ್ಜುನ ಶರಣಾಗದೆ ಶ್ರೀಕೃಷ್ಣ ಉತ್ತರಿಸುವುದಿಲ್ಲ. ಮಾನಸಿಕ ರೋಗಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೊದಲು ಅವರ ಸಮಸ್ಯೆಗಳನ್ನು ಪೂರ್ತಿಯಾಗಿ ಕೇಳಬೇಕು. ಹೇಳಲಿಕ್ಕೆ ಅವಕಾಶ ಕೊಡದೆ ಇದ್ದರೆ ಸಮಸ್ಯೆ ಹಾಗೇ ಮನದಲ್ಲಿ ಉಳಿಯುತ್ತದೆ.
ಮನಃಶಾಸ್ತ್ರದಲ್ಲಿ ಮೂಲ ಕಾರಣವನ್ನು ಕೇಳಲು ಯಾರಾದರೂ ಬೇಕು. ಅರ್ಧದಲ್ಲಿ ನಿಲ್ಲಿಸಿದರೆ ಒಳಗಿದ್ದು ಅದು ಕೊಳೆಯುತ್ತದೆ. ಕೇಳಲಿಕ್ಕೆ ಜನರು ಇಲ್ಲದಿರುವುದೇ ಮಾನಸಿಕ ಸಮಸ್ಯೆಗಳಿಗೆ ಮೂಲ ಕಾರಣ. ಅಮೆರಿಕದ ಮನೆಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಿಗೆ ಆಗುತ್ತಿವೆ, ಅಲ್ಲಿ ಹೊರಟದ್ದು ಭಾರತಕ್ಕೂ ಹಬ್ಬಿದೆ.
ಕೇಳುವಾತನೂ ಅರ್ಹ ಆಗಿರಬೇಕು. ಇಲ್ಲವಾದರೆ ಆತ/ಆಕೆ ದುರುಪಯೋಗಪಡಿಸಿಕೊಳ್ಳುತ್ತಾರೆ. ದುರುಪಯೋಗಪಡಿಸಿಕೊಳ್ಳದೆ ಕೇಳುವವರಾಗಿರಬೇಕು. ಮೊದಲು ಯುದ್ಧ ಮಾಡಲೇಬಾರದು ಎಂದು ಹೇಳಿದ ಅರ್ಜುನ ಕೊನೆಯಲ್ಲಿ ಧರ್ಮಾಧರ್ಮ ಯಾವುದು ಎಂದು ಹೇಳು ಎಂದು ವಿನಂತಿಸಿಕೊಳ್ಳುವ ಹಂತಕ್ಕೆ ತಲುಪಿದ. ವೈದ್ಯರಿಗೆ ತುಂಬ ತಾಳ್ಮೆ ಬೇಕು. ವೈದ್ಯರಿಗೆ ಏನಾಗಿದೆ ಎಂದು ಗೊತ್ತಾದ ಬಳಿಕವೂ ರೋಗಿ ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳುತ್ತಾರೆ. ಆಗಲೇ ರೋಗಿಯ ರೋಗ ಅರ್ಧಾಂಶ ಕಡಿಮೆಯಾದಂತೆ. ಇಲ್ಲವಾದರೆ ರೋಗಿಗೆ ವಿಶ್ವಾಸ ಬರೂದಿಲ್ಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811