ಕ್ಷುದ್ರವಾದರೂ ಅದನ್ನು ಕಡೆಗಣಿಸುವಂತಿಲ್ಲ ಎಂದು ಹಿಂದೆ ಹೇಳಿದ್ದೆವು. ಇದಕ್ಕೆ ಇನ್ನೊಂದರ್ಥ ನಗಣ್ಯತನದ್ದು (ಮಕ್ಕಳಾಟಿಕೆ ರೀತಿ). ಇದು ಸಾಮಾನ್ಯ ಜನರಿಗೆ ಇರುವಂಥದ್ದು. ಜ್ಞಾನಿಗಳಿಗೆ ಇದು ಇರಬಾರದು. ಇಂತಹ ಹೃದಯದೌರ್ಬಲ್ಯ ತರವಲ್ಲ.
ಹೃದಯದೌರ್ಬಲ್ಯವನ್ನು ಬಿಡು ಎನ್ನುತ್ತಾನೆ ಕೃಷ್ಣ. ದೌರ್ಬಲ್ಯವನ್ನು ಜಯಿಸಬೇಕೆ ವಿನಾ ಬಿಡುವುದಲ್ಲ. ಇಲ್ಲಿ ಬಿಡು ಎನ್ನುತ್ತಿದ್ದಾನೆ ಕೃಷ್ಣ. ಈ ಹೃದಯದೌರ್ಬಲ್ಯ ಅಸಹಜವಾದದ್ದು, ಆದ್ದರಿಂದ ಬಿಡು ಎಂದು ಹೇಳುತ್ತಾನೆ. ಇದೇ ಸಂದರ್ಭ ದೌರ್ಬಲ್ಯವು ಸಹಜವೋ? ಅಸಹಜವೋ? ಎಂದು ತಿಳಿದುಕೊಳ್ಳುತ್ತಾನೆ. ಗೀತೆಯ ಥೀಮ್ ಎನ್ನಬಹುದಾದ ಮಾತನ್ನು ಶ್ರೀಕೃಷ್ಣ ಹೀಗೆ ಹೇಳುತ್ತಾನೆ.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್| ಆತೆ¾„ವ ಹ್ಯಾತ್ಮನೋ ಬಂಧುರಾತೆ¾„ವ ರಿಪುರಾತ್ಮನಃ|| (6ನೇ ಅಧ್ಯಾಯ 6ನೇ ಶ್ಲೋಕ)“ನಿನ್ನನ್ನು ನೀನು ಸರಿ ಮಾಡಿಕೊ’ ಎನ್ನುವುದೇ ಕೃಷ್ಣಸಂದೇಶ. ಇದನ್ನು ಹೋಲುವಂತಹ ಸಂದೇಶವನ್ನು ದಾರ್ಶನಿಕರು ಕೊಡುವುದಿದೆ, ಇದನ್ನು ಮೊದಲು ಹೇಳಿದವ ಕೃಷ್ಣ. ಗೀತೆಯ 18 ಅಧ್ಯಾಯ ಮೂಡಿದ್ದೂ ಇದಕ್ಕಾಗಿಯೇ. ಪ್ರಭಾವದಿಂದ ಸಮಸ್ಯೆಯಿಂದ ಆಗಿದ್ದರೆ ಸರಿಪಡಿಸಬಹುದು. ಸ್ವರೂಪಭೂತವಾಗಿದ್ದರೆ ಅದಕ್ಕೆ ಪರಿಹಾರ ಇಲ್ಲ. ಇದಕ್ಕೆ ಪರಿಹಾರ ಉಂಟೋ ಎಂಬುದನ್ನು ಮೊದಲು ಶ್ರೀಕೃಷ್ಣ ನೋಡುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811