ಸ್ತ್ರೀಯರು ಟ್ರೆಂಡ್ ಸೆಟ್ಟರ್‌ಗಳು. ಸಮಾಜದ ಗತಿ ನಿರ್ಧಾರವಾಗುವುದು ಮಹಿಳೆಯರಿಂದ. ಸ್ವಸ್ಥ ಸಮಾಜದ ನಿರ್ಮಾಣವೂ ಆದರ್ಶ ಮಹಿಳೆಯರಿಂದಲೇ. ಸಮಾಜ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಮಹಿಳೆಯರು ನಿರ್ಧರಿಸಬೇಕು. ಸ್ತ್ರೀಯರು ಯಾವುದನ್ನು ಮೌಲ್ಯ ಎಂದು ಹೇಳುತ್ತಾರೋ ಅದನ್ನೇ ಪುರುಷರು ಅಂಗೀಕರಿಸುವರು. ಸ್ತ್ರೀಯರನ್ನು ಪುರುಷರು ಸಂತೋಷಪಡಿಸುವುದು ಸಹಜ. ತಾಯಿ, ಹೆಂಡತಿ ಯಾವುದನ್ನು ಮೌಲ್ಯ ಎಂದು ಟ್ರೆಂಡ್ ಒಪ್ಪುತ್ತಾರೋ ಅಲ್ಲಿಯೇ ಅಪಮೌಲ್ಯವಾದರೆ ಸಮಾಜವೇ ಕುಸಿದು ಹೋಗುತ್ತದೆ. ಹಿಂದೂ ಧರ್ಮವನ್ನು ಅಡಿಮೇಲು ಮಾಡಲು ಬ್ರಿಟಿಷರು ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡರು.
ಕಲಾವಿದರು, ಸಾಹಿತಿಗಳು ಮೊದಲು ಅಟ್ಯಾಕ್ ಮಾಡಿದ್ದು ವೈದಿಕರ ಇಮೇಜ್‌ಗೆ. ಸಿನೆಮಾ, ನಾಟಕಗಳಲ್ಲಿ ಹಾಸ್ಯಪಾತ್ರಕ್ಕೆ ಸಿಕ್ಕಿದ್ದು ವೈದಿಕರ ವೇಷಗಳು. ಇದಕ್ಕೆ ಒಂದಿಷ್ಟು ಜನರನ್ನು ಬಳಸಿಕೊಂಡರು. ಮೌಲ್ಯಗಳು ವೈದಿಕ ಪರಂಪರೆಯ ನೇತೃತ್ವದಲ್ಲಿ ಸಮಾಜಕ್ಕೆ ಲಭಿಸುತ್ತಿತ್ತು. ನಾಯಕರನ್ನು ದುಷ್ಟರನ್ನಾಗಿ ಬಿಂಬಿಸಿದರೆ ಇಡೀ ಸಮಾಜವೇ ಸಂಶಯ ದೃಷ್ಟಿಯಿಂದ ಕಾಣುವಂತಾಗುತ್ತದೆ.
ತಂದೆಯನ್ನೇ ದುಷ್ಟರೆಂದು ಪ್ರತಿಬಿಂಬಿಸಿದರೆ ಆ ವಂಶವವನ್ನೇ ಜನರು ದುಷ್ಟರೆಂದು ಪರಿಗಣಿಸುತ್ತಾರೆ. ಬ್ರಿಟಿಷರಿಗೆ ಆಗಬೇಕಾದದ್ದು ಹಾಗೆಯೇ. ಒಂದು ಕಡೆ ಮೌಲ್ಯಗಳ ಅಧಃಪತನ ಹೀಗೆ ನಡೆದರೆ, ಇನ್ನೊಂದು ಕಡೆ ಬೇಡಿಕೆಗಳ ಧಾವಂತ ಆಗಿದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811