ಗೀತೆಯ ನಿಜವಾದ ಉಪದೇಶ ಎರಡನೆಯ ಅಧ್ಯಾಯದ 11ನೆಯ ಶ್ಲೋಕ “ಅಶೋಚ್ಯಾ…’ದಿಂದ ಆರಂಭವಾಗುವುದು. ಪ್ರಥಮ ಅಕ್ಷರ “ಅ’ ಕಾರದಿಂದಲೇ ಅಂದರೆ ಬ್ರಹ್ಮಪ್ರತಿಪಾದನೆ ಆರಂಭವಾಗುವುದು. ದೇವರ ಬಗ್ಗೆ ತಿಳಿದುಕೊಳ್ಳಲೇ ಇಲ್ಲ ಎಂದು ದುಃಖ ಮಾಡಿದರೆ ಉತ್ತಮವೇ. ಇತರ ದುಃಖಗಳು ಉತ್ತಮವಾದವಲ್ಲ.
ಬ್ರಹ್ಮನ ಬಗೆಗೆ ಚಿಂತನೆ ಬಿಟ್ಟು ಉಳಿದೆಲ್ಲ ದುಃಖವೂ ಸಾತ್ವಿಕವಲ್ಲ. ವಿಷಯ ಪ್ರತಿಪಾದನೆ ಬಗ್ಗೆ ಶೋಕ ಮಾಡಿದರೆ ಮತ್ತಷ್ಟು ದುಃಖವಾಗುತ್ತದೆ. ನಮ್ಮ ಪರಿಸ್ಥಿತಿ ನೋಡಿ ನಾವು ಶೋಕ ಮಾಡಬೇಕು. ಇದನ್ನು ಬಿಟ್ಟು ಇತರನ್ನು ನೋಡಿ ಶೋಕಿಸುತ್ತೇವಲ್ಲ ಎನ್ನುತ್ತಾನೆ ಶ್ರೀಕೃಷ್ಣ. ನಮ್ಮ ದುಃಖದಿಂದ ಇನ್ನೊಬ್ಬರ ದುಃಖ ಹೆಚ್ಚಾಗಬಾರದು. ನಮ್ಮಿಂದ ಜಗತ್ತಿಗೆ ಏನೂ ಕೊಡಲಾಗಲಿಲ್ಲ ಎಂಬ ಶೋಕ ಬೇಕು. ಏನೂ ಮಾಡಲಾಗದಿದ್ದರೆ ನಗುತ್ತ ಇರೋಣ. ನಾವು ನಗುತ್ತಿದ್ದರೆ ಇತರರಿಗೂ ಸತ್ಪರಿಣಾಮ ಬೀರುತ್ತದೆ.
ದೇವರ ಬಗ್ಗೆ ಶೋಕ ಮಾಡಿದರೆ ಇನ್ನೊಬ್ಬರ ಮೇಲೆ ಕನಿಷ್ಠ ಧನಾತ್ಮಕ ಪರಿಣಾಮ ಬರುತ್ತದೆ. ಭಗವತ್ಪರವಾಗಿರದೆ ಲೋಕಪರವಾಗಿದ್ದರೆ ಆತ್ಮಸಂಕುಚಿತವಾಗುತ್ತದೆ. ಅಯೋಗ್ಯರಿಗೆ ಸುಖವನ್ನು ಕೊಟ್ಟರೆ ಅದೂ ಕೆಡುಕೇ. ನೀನಾದರೋ ಅಯೋಗ್ಯರಿಗೆ ಸುಖವನ್ನು ಕೊಡುತ್ತಿದ್ದೀಯಲ್ಲ? ಆತ್ಮವಿಕಾಸವಾಗುವ ದುಃಖ ಬೇಕು, ಆತ್ಮಸಂಕೋಚವಾಗುವ ದುಃಖ ಬೇಡ. ಎಲ್ಲರಿಗೂ ಸುಖ ಉಂಟಾಗುವಂತೆ ನಾವು ನಡೆದುಕೊಳ್ಳಬೇಕೆಂಬುದು ತಾತ್ಪರ್ಯ. ಇದುವೇ ಬ್ರಹ್ಮಪರವಾದ ಶ್ಲೋಕ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811